HomeEntertainmentರಿಲೀಸ್ ಆಯ್ತು 'ತಾರಿಣಿ' ಚಿತ್ರದ ಟ್ರೈಲರ್

ರಿಲೀಸ್ ಆಯ್ತು ‘ತಾರಿಣಿ’ ಚಿತ್ರದ ಟ್ರೈಲರ್

ಸಿದ್ದು ಪೂರ್ಣಚಂದ್ರ ರಚಿಸಿ ನಿರ್ದೇಶಿಸಿರುವ ‘ತಾರಿಣಿ’ ಚಿತ್ರದ ಟೈಲರ್ ನಿನ್ನೆ ಯುಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ಟ್ರೈಲರ್ ನೋಡುಗರಲ್ಲಿ ಕುತೂಹಲ ಮೂಡಿಸುವ ಮೂಲಕ ಕೆಲವೇ ಗಂಟೆಗಳಲ್ಲಿ ಸಾಕಷ್ಟು ವೀಕ್ಷಣೆ ಗಳಿಸಿ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿದೆ.

ಈ ಚಿತ್ರವನ್ನು ಶ್ರೀ ಗಜನಿ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಸುರೇಶ್ ನಿರ್ಮಾಣ ಮಾಡಿದ್ದು, ಮಮತಾ ರಾಹುತ್ ಸೇರಿದಂತೆ ರೋಹಿತ್, ಭವಾನಿ ಪ್ರಕಾಶ್, ಪ್ರಮೀಳಾ ಸುಬ್ರಹ್ಮಣ್ಯಂ, ಸುಧಾ ಪ್ರಸನ್ನ, ವಿಜಯಲಕ್ಷ್ಮಿ, ತೇಜಸ್ವಿನಿ, ಮಂಜು, ಶ್ವೇತಾ, ಅರ್ಚನ ಗಾಯಕ್ವಾಡ್, ಬೇಬಿ ಪ್ರಿನ್ಸ್ ಜಿತಿನ್, ಮತ್ತು ಬೇಬಿ ನಿಶಿತ ತೆರೆ ಹಂಚಿಕೊಂಡಿದ್ದಾರೆ. ಅನಂತ್ ಆರ್ಯನ್ ಸಂಗೀತ ಸಂಯೋಜನೆ ನೀಡಿದ್ದು, ದೀಪಕ್ ಸಂಕಲನ, ರಾಜು ಎಮ್ಮಿಗೆಪುರ ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular