ಪ್ಲೇನ್ ಫ್ರೈಡ್ ರೈಸ್ ತಿಂದು ಬೇಸರವಾಗಿದ್ದರೆ ಕ್ಯಾರೆಟ್-ಬಟಾಣಿ ಫ್ರೈಡ್ ರೈಸ್ ಮಾಡಿ ರುಚಿ ನೋಡಿ.
ಕ್ಯಾರೆಟ್ –ಬಟಾಣಿ ಫ್ರೈಡ್ ರೈಸ್ ಗೆ ಬೇಕಾಗುವ ಪದಾರ್ಥ: ಅರ್ಧ ಕೆ.ಜಿ. ಅಕ್ಕಿ, 2 ದಾಲ್ಚಿನಿ, 2 ಲವಂಗ, ಮೂರ್ನಾಲ್ಕು ಕರಿ ಬೇವಿನ ಎಲೆ, ಸಣ್ಣಗೆ ಕತ್ತರಿಸಿದ ಮೂರ್ನಾಲ್ಕು ಗೋಡಂಬಿ, 2 ಕ್ಯಾರೆಟ್, ಒಂದು ಸಣ್ಣ ಬಟ್ಟಲಿನಲ್ಲಿ ಬಟಾಣಿ, 2-3 ಚಮಚ ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು (ಅಲಂಕಾರಕ್ಕೆ), ನೀರು ಅವಶ್ಯವಿದ್ದಷ್ಟು.
ಕ್ಯಾರೆಟ್-ಬಟಾಣಿ ಫ್ರೈಡ್ ರೈಸ್ ಮಾಡುವ ವಿಧಾನ: ಕುಕ್ಕರ್ ಗೆ ಅಕ್ಕಿ, ನೀರು ಹಾಗೂ ಸ್ವಲ್ಪ ತುಪ್ಪ ಹಾಕಿ ಎರಡು ಸೀಟಿ ಕೂಗಿಸಿ.
ಇನ್ನೊಂದು ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಿ. ತುಪ್ಪ ಬಿಸಿಯಾಗ್ತಿದ್ದಂತೆ ದಾಲ್ಚಿನಿ, ಲವಂಗ, ಬೇವಿನ ಎಲೆ ಹಾಕಿ ಬಿಸಿ ಮಾಡಿ. ಅದು ಬಿಸಿಯಾಗ್ತಿದ್ದಂತೆ ಗೋಡಂಬಿ ಹಾಕಿ. ಸ್ವಲ್ಪ ಸಮಯ ಬಿಟ್ಟು ಕ್ಯಾರೆಟ್, ಬಟಾಣಿ ಹಾಗೂ ಉಪ್ಪು ಹಾಕಿ. ಯಾವುದೇ ಕಾರಣಕ್ಕೂ ನೀರು ಹಾಕಬೇಡಿ.
ಕ್ಯಾರೆಟ್, ಬಟಾಣಿ ಬೆಂದ ನಂತ್ರ ಇದಕ್ಕೆ ಅನ್ನವನ್ನು ಹಾಕಿ ಸರಿಯಾಗಿ ಮಿಕ್ಸ್ ಮಾಡಿ ಐದು ನಿಮಿಷ ಬಿಸಿ ಮಾಡಿ. ನಂತ್ರ ಕೊತ್ತಂಬರಿ ಸೊಪ್ಪನ್ನು ಮೇಲೆ ಉದುರಿಸಿ ಸರ್ವ್ ಮಾಡಿ.