HomeEntertainmentಇಂದು ಪುನೀತ್ ರಾಜ್ ಕುಮಾರ್ ಜನ್ಮದಿನ ; ಅಪ್ಪು ಸಮಾಧಿ ಬಳಿ ಹರಿದು ಬಂದ ಜನಸಾಗರ

ಇಂದು ಪುನೀತ್ ರಾಜ್ ಕುಮಾರ್ ಜನ್ಮದಿನ ; ಅಪ್ಪು ಸಮಾಧಿ ಬಳಿ ಹರಿದು ಬಂದ ಜನಸಾಗರ

ಬೆಂಗಳೂರು : ಇಂದು ಅಭಿಮಾನಿಗಳ ಹೃದಯಗಳಲ್ಲಿ ಸದಾ ನೆಲೆಸಿರುವ ಪರಮಾತ್ಮ, ನಗುಮುಖದ ಸರದಾರ, ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನ.

ಪುನೀತ್ ರಾಜ್ ಕುಮಾರ್ ಜನ್ಮದಿನ ಹಿನ್ನೆಲೆ ಅಪ್ಪು ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಇಂದು ಮುಂಜಾನೆಯಿಂದಲೇ ಅಭಿಮಾನಿಗಳು ಕಂಠೀರವ ಸ್ಟುಡಿಯೋನಲ್ಲಿನ ಅಪ್ಪು ಸಮಾಧಿಗೆ ತೆರಳಿ ದರ್ಶನ ಪಡೆಯುತ್ತಿದ್ದಾರೆ.

ಮಧ್ಯರಾತ್ರಿಯಿಂದಲೇ ಬರ್ತಡೆ ಸೆಲೆಬ್ರೇಷನ್ ಶುರು ಆಗಿದ್ದು, ಅಭಿಮಾನಿಗಳಿಂದ ಅನ್ನದಾನ,ರಕ್ತದಾನ, ನೇತ್ರದಾನ ಶಿಬಿರ ಕೂಡ ನೆರವೇರಲಿದೆ. ಅಪ್ಪು ಸಮಾಧಿ ಬಳಿ ಹಲವು ರೀತಿಯ ಕಾರ್ಯಕ್ರಮಗಳು ಳಿ ಪ್ರಾರಂಭವಾಗಿದ್ದು, ಬೆಳಗ್ಗೆ ಹತ್ತು ಗಂಟೆಗೆ ಕುಟುಂಬದಿಂದ ಸಮಾಧಿ ಪೂಜೆ ನೆರವೇರಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕನ್ನಡದ ಖ್ಯಾತ ಚಲನಚಿತ್ರ ನಟ, ಸಾಮಾಜಿಕ, ಪರಿಸರ ಕಾಳಜಿಯೊಂದಿಗೆ ಎಲ್ಲರಿಗೂ ಸ್ಫೂರ್ತಿಯಾಗಿ, ಸದಾ ಹಸನ್ಮುಖಿಯಾಗಿದ್ದ ನಮ್ಮೆಲ್ಲರ ಅಪ್ಪು ಕರ್ನಾಟಕ ರತ್ನ ಡಾ. ಪುನೀತ್ ರಾಜ್ಕುಮಾರ್ ಅವರ ಜನ್ಮದಿನದ ಸ್ಮರಣೆ ಇಂದು ರಾಜ್ಯಾದ್ಯಂತ ನಡೆಯಲಿದೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular