HomeAutoಮುಖೇಶ್‌ ಅಂಬಾನಿ ಕುಟುಂಬದಿಂದ ಭಾವಿ ಸೊಸೆಗೆ ಕೋಟಿ ಕೋಟಿ ಬೆಲೆಬಾಳುವ ಗಿಫ್ಟ್‌; ಬೆರಗಾಗಿಸುತ್ತೆ ಇದರ ವಿವರ...!

ಮುಖೇಶ್‌ ಅಂಬಾನಿ ಕುಟುಂಬದಿಂದ ಭಾವಿ ಸೊಸೆಗೆ ಕೋಟಿ ಕೋಟಿ ಬೆಲೆಬಾಳುವ ಗಿಫ್ಟ್‌; ಬೆರಗಾಗಿಸುತ್ತೆ ಇದರ ವಿವರ…!

ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ವಿವಾಹದ ಸಿದ್ಧತೆಗಳು ಪ್ರಾರಂಭವಾಗಿವೆ. ಈಗಾಗ್ಲೇ ಅಂಬಾನಿ ಕುಟುಂಬದಲ್ಲಿ ಸಡಗರ-ಸಂಭ್ರಮ ಮೇಳೈಸಿದೆ. ಈ ಅದ್ಧೂರಿ ಮದುವೆ ಬಗ್ಗೆ ದೇಶದಲ್ಲಿ ಭಾರೀ ಚರ್ಚೆಯೂ ಆಗ್ತಿದೆ. ವಿಶೇಷ ಅಂದ್ರೆ ಮದುವೆಗೂ ಮೊದಲೇ ಅನಂತ್‌ ಅಂಬಾನಿಯನ್ನು ವರಿಸುತ್ತಿರುವ ರಾಧಿಕಾ ಮರ್ಚೆಂಟ್‌ಗೆ ಭಾರೀ ಉಡುಗೊರೆಗಳನ್ನು ನೀಡಲಾಗಿದೆ.

ವಿವಾಹ ಪೂರ್ವ ಸಮಾರಂಭಕ್ಕೂ ಮುನ್ನವೇ ಅಂಬಾನಿ ಕುಟುಂಬದಿಂದ ಭಾವಿ ಸೊಸೆ ರಾಧಿಕಾ ಮರ್ಚೆಂಟ್‌ಗೆ ಕೋಟಿಗಟ್ಟಲೆ ಬೆಲೆಬಾಳುವ ಉಡುಗೊರೆಗಳು ಬಂದಿವೆ. ಮುಖೇಶ್‌ ಅಂಬಾನಿ ಹಾಗೂ ನೀತಾ ಅಂಬಾನಿ, ತಮ್ಮ ಭಾವಿ ಸೊಸೆಗೆ ಉಡುಗೊರೆಗಳ ಸುರಿಮಳೆಗೈದಿದ್ದಾರೆ. 4.5 ಕೋಟಿ ರೂಪಾಯಿ ಮೌಲ್ಯದ ಕಾರನ್ನು ಕೊಟ್ಟಿದ್ದಾರೆ.

ಸುಂದರವಾದ ಬೆಂಟ್ಲಿ ಕಾಂಟಿನೆಂಟಲ್ ಜಿಟಿಸಿ ಸ್ಪೀಡ್ ಕಾರು ಇದು. ದೇಶದಲ್ಲಿ ಕೆಲವೇ ಕೆಲವು ಸೆಲೆಬ್ರಿಟಿಗಳು ಈ ಕಾರನ್ನು ಹೊಂದಿದ್ದಾರೆ. ವಿರಾಟ್ ಕೊಹ್ಲಿ, ಅಮೀರ್ ಖಾನ್, ಅಭಿಷೇಕ್ ಬಚ್ಚನ್‌ರಂತಹ ಪ್ರಸಿದ್ಧ ವ್ಯಕ್ತಿಗಳ ಬಳಿ ಮಾತ್ರ ಈ ಐಷಾರಾಮಿ ಕಾರು ಇದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಷ್ಟೇ ಅಲ್ಲ ಮೂಲಗಳ ಪ್ರಕಾರ ರಾಧಿಕಾ ಮರ್ಚೆಂಟ್‌ಗೆ ಬೆಲೆಬಾಳುವ ವಜ್ರದ ನೆಕ್ಲೇಸ್ ಅನ್ನು ಕೂಡ ಅಂಬಾನಿ ಫ್ಯಾಮಿಲಿಯಿಂದ ನೀಡಲಾಗಿದೆ. ಇನ್ನು ನೀತಾ ಅಂಬಾನಿ ತಮ್ಮ ಭಾವಿ ಸೊಸೆಗೆ ಲಕ್ಷ್ಮಿ-ಗಣೇಶ ಗಿಫ್ಟ್ ಹ್ಯಾಂಪರ್ ನೀಡಿದ್ದಾರೆ. ಇದು ಬೆಳ್ಳಿಯ ತುಳಸಿ ಪಾತ್ರೆಯೊಂದಿಗೆ ಲಕ್ಷ್ಮಿ-ಗಣೇಶನ ವಿಗ್ರಹವನ್ನು ಒಳಗೊಂಡಿದೆ.

For Latest News Updates, Join Our Whatsapp Community🚩
RELATED ARTICLES

Most Popular