ಬಾಲಿವುಡ್ ನಟಿ ಯಾಮಿ ಗೌತಮ್ ಅವರ ಮುಂಬರುವ ಚಿತ್ರ ಆರ್ಟಿಕಲ್ 370 ರ ಟ್ರೈಲರ್ ಗುರುವಾರ (ಫೆಬ್ರವರಿ 9, 2024) ಬಿಡುಗಡೆಯಾಗಿದೆ. ಕೆಲವೇ ಸಮಯದಲ್ಲಿ, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿತು.
ಟ್ರೇಲರ್ ನಲ್ಲಿ ಕಂಡು ಬಂದ ಕೆಲವು ಪಾತ್ರಗಳು ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆಯನ್ನು ಗಳಿಸುತ್ತಿದೆ. ಕೆಲವು ಅಸಂಬದ್ಧ ಆಕ್ಷನ್ ಚಿತ್ರಗಳಿಗಿಂತ ಭಿನ್ನವಾಗಿ ಸಿನಿಮಾ ಬಂದಿದೆ. ಚಿತ್ರಮಂದಿರಗಳಲ್ಲಿ ಇದನ್ನು ನೋಡಲೇಬೇಕು. ಯಾಮಿ ಗೌತಮ್ ರಾಕ್ಸ್!” ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. “ಈ ಚಿತ್ರವು ಖಂಡಿತವಾಗಿಯೂ ರಾಷ್ಟ್ರೀಯ ಪ್ರಶಸ್ತಿಯನ್ನು ಗೆಲ್ಲುತ್ತದೆ” ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.
ಈ ಚಿತ್ರದಲ್ಲಿ ರಾಮಾಯಣ ನಟ ಅರುಣ್ ಗೋವಿಲ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಪಾತ್ರವನ್ನು ನಿರ್ವಹಿಸಲಿದ್ದಾರೆ. ಟ್ರೈಲರ್ ನಿಂದ ಅವರ ಫಸ್ಟ್ ಲುಕ್ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
Arun Govil ji as Modiji, best potrayed by him pic.twitter.com/6i3ikQmdvR
— Rateek (@Rateek14) February 8, 2024

