HomeEntertainmentನಾಳೆ ಬಿಡುಗಡೆಗೆ ಸಜ್ಜಾಗಿದೆ 'ನಗುವಿನ ಹೂಗಳ ಮೇಲೆ'

ನಾಳೆ ಬಿಡುಗಡೆಗೆ ಸಜ್ಜಾಗಿದೆ ‘ನಗುವಿನ ಹೂಗಳ ಮೇಲೆ’

ವೆಂಕಟ್ ಭಾರದ್ವಾಜ್ ರಚಿಸಿ ನಿರ್ದೇಶಿಸಿರುವ ‘ನಗುವಿನ ಹೂಗಳ ಮೇಲೆ’ ಸಿನಿಮಾ ನಾಳೆ ರಾಜ್ಯಾದ್ಯಂತ ತೆರೆ ಮೇಲೆ ಅಪ್ಪಳಿಸಲಿದೆ. ರೋಮ್ಯಾಂಟಿಕ್ ಲವ್ ಸ್ಟೋರಿ ಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ  ಕಿರುತೆರೆ ಕಲಾವಿದರಾದ ಅಭಿದಾಸ್ ಮತ್ತು ಶರಣ್ಯ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಈ ಸಿನಿಮಾವನ್ನು ಶ್ರೀ ಸಾಯಿ ಸತ್ಯ ಆರ್ಟ್ಸ್ ಬ್ಯಾನರ್ ನಡಿ ಕೆ.ಕೆ. ರಾಧಾ ಮೋಹನ್ ನಿರ್ಮಾಣ ಮಾಡಿದ್ದು, ಲವ್ ಫ್ರಾನ್ ಮೆಹತಾ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಚಂದನ್ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನ, ಹಾಗೂ ಅಭಿಷೇಕ್ ಅಯಂಗಾರ್ ಡೈಲಾಗ್ ಬರೆದಿದ್ದಾರೆ.

ಲಾರೆನ್ಸ್ ಪ್ರೀತಮ್ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅಭಿದಾಸ್ ಮತ್ತು ಶರಣ್ಯ ಶೆಟ್ಟಿ ಸೇರಿದಂತೆ ಗಿರೀಶ್ ನಂಜಪ್ಪ, ಬಾಲರಾಜ್ವಾಡಿ, ಆಶಾ ಸುಜಯ್, ಹರ್ಷಿತ್ ಗೌಡ, ಹರೀಶ್ ಚೌಹಾಣ್, ಅಭಿಷೇಕ್ ಅಯಂಗಾರ್ ತೆರೆ ಹಂಚಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular