HomeEntertainment'ಮತ್ಸ್ಯಗಂಧ' ಚಿತ್ರದ ವಿಡಿಯೋ ಹಾಡು ರಿಲೀಸ್

‘ಮತ್ಸ್ಯಗಂಧ’ ಚಿತ್ರದ ವಿಡಿಯೋ ಹಾಡು ರಿಲೀಸ್

ಪೃಥ್ವಿ ಅಂಬಾರ್ ಅಭಿನಯದ ‘ಮತ್ಸ್ಯಗಂಧ’ ಚಿತ್ರದ ”ಕಡಲ ಒಡಲ ತಡಿಯ ಮೇಲೆ” ಎಂಬ ಹಾಡನ್ನು ಯುಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ತುಂಬಾ ಸೊಗಸಾಗಿ ಮೂಡಿ ಬಂದಿದೆ. ಹೇಮಂತ್ ಕುಮಾರ್ ಈ ಗೀತೆಗೆ ಧ್ವನಿಯಾಗಿದ್ದು, ‘ಪ್ರಶಾಂತ್ ಸಿದ್ದಿ ಸಂಗೀತ ಹಾಗೂ ದೇವರಾಜ್ ಪೂಜಾರಿ ಸಾಹಿತ್ಯವಿದೆ.

ಈ ಚಿತ್ರವನ್ನು ದೇವರಾಜ್ ಪೂಜಾರಿ ನಿರ್ದೇಶಿಸಿದ್ದು, ಸಹ್ಯಾದ್ರಿ ಪ್ರೊಡಕ್ಷನ್ ಬ್ಯಾನರ್ ನಲ್ಲಿ ವಿಶ್ವನಾಥ್ ನಿರ್ಮಾಣ ಮಾಡಿದ್ದಾರೆ. ಪೃಥ್ವಿ ಅಂಬಾರ್ ಸೇರಿದಂತೆ ಕಿರಣ್ ನಾಯಕ್, ಅಶೋಕ್ ಹೆಗಡೆ, ಸತೀಶ್ ಚಂದ್ರ, ದಿಶಾ ಶೆಟ್ಟಿ, ಭಜರಂಗಿ ಲೋಕಿ, ಶರತ್ ಲೋಹಿತಾಶ್ವ, ಅಂಜಲಿ ಪಾಂಡೆ, ಪ್ರತಿಮಾ ನಾಯಕ್, ನಿರೀಕ್ಷಾ ಶೆಟ್ಟಿ, ಗೌತಮ್, ಗಣೇಶ್, ಪ್ರಭಾಕರ್ ಕಲ್ಯಾಣಿ, ದೀಪ ಶ್ರೀನಿವಾಸ್, ಶಿಲ್ಪ ಆಚಾರ್ಯ, ದಿವ್ಯ ಶೆಟ್ಟಿ, ಕಾಂತರಾಜ್ ಕಡ್ಡಿಪುಡಿ, ರೋಹನ್ ಲೋಕೇಶ್, ಗಜಾನನ ಹೆಗಡೆ ಬಣ್ಣ ಹಚ್ಚಿದ್ದಾರೆ. ಪ್ರಶಾಂತ್ ಸಿದ್ದಿ ಸಂಗೀತ ಶ್ರೀನಿವಾಸ್ ಸಂಕಲನ ಪ್ರವೀಣ್ ಎಂ ಪ್ರಭು ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular