HomeEntertainmentಗಾನಪ್ರಿಯರ ಗಮನ ಸೆಳೆದ 'ಜಸ್ಟ್ ಪಾಸ್' ಚಿತ್ರದ ''ಎಕ್ಸ್ ಕ್ಯೂಸ್ ಮಿ ಕೇಳಿ'' ಹಾಡು

ಗಾನಪ್ರಿಯರ ಗಮನ ಸೆಳೆದ ‘ಜಸ್ಟ್ ಪಾಸ್’ ಚಿತ್ರದ ”ಎಕ್ಸ್ ಕ್ಯೂಸ್ ಮಿ ಕೇಳಿ” ಹಾಡು

‘ಜಸ್ಟ್ ಪಾಸ್’ ಚಿತ್ರತಂಡ ಇತ್ತೀಚಿಗಷ್ಟೇ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದ್ದು, ಇದೀಗ ಲಿರಿಕಲ್ ಸಾಂಗ್ ಒಂದನ್ನು ಬಿಡುಗಡೆ ಮಾಡಿದೆ. ನಟ ಶರಣ್ ಧ್ವನಿಯಲ್ಲಿ ಮೂಡಿ ಬಂದಿರುವ ‘ಎಕ್ಸ್ ಕ್ಯೂಸ್ ಮಿ ಕೇಳಿ ನನ್ನ ಲಚ್ಚರು’ ಎಂಬ ಈ ಹಾಡಿಗೆ ಗಾನಪ್ರಿಯರು ಫಿದಾ ಆಗಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ ಸಂಯೋಜನೆ ನೀಡಿದ್ದು, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ  ಬರೆದಿದ್ದಾರೆ.

ಈ ಚಿತ್ರವನ್ನು ರಾಯ್ ಎಂಟರ್ಟೈನ್ಮೆಂಟ್ ಬ್ಯಾನರ್ ನಡಿ ಕೆ ವಿ ಶಶಿಧರ್ ನಿರ್ಮಾಣ ಮಾಡಿದ್ದು, ನಟ ಶ್ರೀ ಸೇರಿದಂತೆ ರಂಗಾಯಣ ರಘು, ಪ್ರಣತಿ, ಸಾಧು ಕೋಕಿಲ, ಪ್ರಕಾಶ್, ಸುಚೇಂದ್ರ ಪ್ರಸಾದ್, ದೀಪಕ್, ಅರ್ಪಿತ, ಚಂದ್ರುಶ್ರೀ, ಗಗನ್, ನಿಖಿಲ್, ಡುಮ್ಮ ವಿಶ್ವಾಸ್ ಮತ್ತು ದಾನಪ್ಪ ಬಣ್ಣ ಹಚ್ಚಿದ್ದಾರೆ. ಕೆ ಎಂ ಪ್ರಕಾಶ್ ಸಂಕಲನ ಹಾಗೂ ಸುಜಯ್ ಕುಮಾರ್ ಬಾವಿಕಟ್ಟೆ ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular