HomeIndiaBREAKING : ʻI.N.D.I.Aʼ ಮೈತ್ರಿಕೂಟಕ್ಕೆ ಬಿಗ್‌ ಶಾಕ್‌ : ನಾಳೆ ಸಿಎಂ ಸ್ಥಾನಕ್ಕೆ ನಿತೇಶ್...

BREAKING : ʻI.N.D.I.Aʼ ಮೈತ್ರಿಕೂಟಕ್ಕೆ ಬಿಗ್‌ ಶಾಕ್‌ : ನಾಳೆ ಸಿಎಂ ಸ್ಥಾನಕ್ಕೆ ನಿತೇಶ್ ಕುಮಾರ್ ರಾಜೀನಾಮೆ ಸಾಧ್ಯತೆ| Nitesh Kumar

ಪಾಟ್ನಾ : ಬಿಹಾರ ರಾಜಕೀಯದಲ್ಲಿ ಮಹತ್ವದ ಬದಲಾವಣೆಯಾಗುವ ಮುನ್ಸೂಚನೆ ಸಿಕ್ಕಿದ್ದು, ನಾಳೆ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್‌ ಕುಮಾರ್‌ ರಾಜೀನಾಮೆ ನೀಡುವ ಸಾಧ್ಯತೆ ಇದೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬುಧವಾರ ಪರೋಕ್ಷವಾಗಿ ಲಾಲು ಕುಟುಂಬವನ್ನು ಗುರಿಯಾಗಿಸಿಕೊಂಡಿದ್ದಾರೆ. ಆರ್‌ ಜೆಡಿ ಮತ್ತು ಜೆಡಿಯು ನಡುವಿನ ಬಿರುಕು ಹೆಚ್ಚಾಗಿದೆ. ನಿತೀಶ್ ಕುಮಾರ್ ಮತ್ತೆ ಪಕ್ಷಾಂತರ ಮಾಡಬಹುದು. ಅವರು ಮೈತ್ರಿಯನ್ನು ಮುರಿದು ಮತ್ತೆ ಬಿಜೆಪಿಗೆ ಸೇರಬಹುದು ಎಂಬ ಊಹಾಪೋಹಗಳಿವೆ.

ಮೂಲಗಳ ಪ್ರಕಾರ, ನಿತೀಶ್ ಕುಮಾರ್ ಮತ್ತೆ ಮರಳಲು ಬಿಜೆಪಿ ಹೈಕಮಾಂಡ್ ಅನುಮೋದನೆ ನೀಡಿದೆ. ನಿತೀಶ್ ಕುಮಾರ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬಹುದು ಎಂದು ನಂಬಲಾಗಿದೆ. ಇದರ ನಂತರ, ಬಿಹಾರ ವಿಧಾನಸಭೆಯನ್ನು ವಿಸರ್ಜಿಸಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಮೂಲಕ ಲೋಕಸಭೆ ಚುನಾವಣೆಗೆ ಮುನ್ನ ಇಂಡಿಯಾ ಮೈತ್ರಿಕೂಟಕ್ಕೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ, ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಎಎಪಿ ಬಳಿಕ   ಇದೀಗ ನಿತಿಶ್‌ ಕುಮಾರ್‌ ಶಾಕ್‌ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular