HomeKarnatakaBIG NEWS: ಏರ್ ಪೋರ್ಟ್ ಕ್ಯಾಬ್ ಸಂಸ್ಥೆಯ ಮಹಿಳಾ ಉದ್ಯೋಗಿ ನಾಪತ್ತೆ; ಕಂಗಾಲಾದ ಕುಟುಂಬ

BIG NEWS: ಏರ್ ಪೋರ್ಟ್ ಕ್ಯಾಬ್ ಸಂಸ್ಥೆಯ ಮಹಿಳಾ ಉದ್ಯೋಗಿ ನಾಪತ್ತೆ; ಕಂಗಾಲಾದ ಕುಟುಂಬ

ಬೆಂಗಳೂರು: ಏರ್ ಪೋರ್ಟ್ ಕ್ಯಾಬ್ ಸಂಸ್ಥೆಯ ಮಹಿಳಾ ಉದ್ಯೋಗಿಯೊಬ್ಬರು ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲಿ ಕ್ಯಾಬ್ ಕಂಪನಿಯೊಂದರಲ್ಲಿ ಬುಕಿಂಗ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ 27 ವರ್ಷದ ಮಹಿಳೆ ನಾಪತ್ತೆಯಾಗಿದ್ದಾರೆ. ತುಮಕೂರು ಮೂಲದ ನೇತ್ರಾ ನಾಪತ್ತೆಯಾಗಿರುವವರು.

ಕಳೆದ ನಾಲ್ಕು ದಿನಗಳಿಂದ ಮಹಿಳೆ ಸುಳಿವಿಲ್ಲ ಎಂದು ಆಕೆಯ ಸಹೋದರ ಏರ್ ಪೋರ್ಟ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನೇತ್ರಾ ಏರ್ ಪೋರ್ಟ್ ಬಳಿಯ ಹುಣಸಮಾರನಹಳ್ಳಿಯಲ್ಲಿ ಪಿಜಿಯಲ್ಲಿದ್ದುಕೊಂಡು WIT ಕ್ಯಾಬ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರತಿದಿನ ಕುಟುಂಬದವರಿಗೆ ಕರೆ ಮಾಡಿ ಮಾತನಾಡುತ್ತಿದ್ದರು. ಡಿ.29ರಂದು ಮಧ್ಯಾಹ್ನ ಕರೆ ಮಾಡಿದ್ದ ನೇತ್ರಾ ಅಂದು ರಾತ್ರಿ ನೈಟ್ ಶಿಫ್ಟ್ ಇರುವುದಾಗಿ ಹೇಳಿದ್ದರು. ಅದಾದ ಬಳಿಕ ಯಾವುದೇ ಕರೆಗಳನ್ನು ಸ್ವೀಕರಿಸುತ್ತಿಲ್ಲ. ಈಗ ಫೋನ್ ಸ್ವಿಚ್ಡ್ ಆಫ್ ಆಗಿದೆ ಎನ್ನಲಾಗಿದೆ. ನೇತ್ರಾ ಸಹೋದರ ಮಹೇಶ್ ಜ.1ರಂದು ಏರ್ ಪೋರ್ಟ್ ಬಳಿ ಕ್ಯಾಬ್ ಸಂಸ್ಥೆಗೆ ಬಂದು ವಿಚಾರಿಸಿದಾಗ ಆಕೆ ನೈಟ್ ಶಿಫ್ಟ್ ಮುಗಿಸಿ ಮುಂಜಾನೆ 6 ಗಂಟೆಗೆ ತೆರಳಿದ್ದಾಗಿ ಹೇಳಿದ್ದಾರೆ. ಸ್ನೇಹಿತರಿಗೆ ವಿಚಾರಿಸಿದರೂ ಪ್ರಯೋಜನವಾಗಿಲ್ಲ.

ಗಾಬರಿಗೊಂಡಿರುವ ಕುಟುಂಬದವರು ಏರ್ ಪೋರ್ಟ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಳೆದ ನಾಲ್ಕು ತಿಂಗಳಲ್ಲಿ ವಿಮಾನ ನಿಲ್ದಾಣ ಠಾಣೆಯಲ್ಲಿ ಒಟ್ಟು ನಾಲ್ಕು ನಾಪತ್ತೆ ಕೇಸ್ ದಾಖಲಾಗಿದ್ದು, ಆತಂಕಕಾರಿ ಬೆಳವಣಿಗೆಯಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular