ಭಾರತದ ಉಗ್ರ, ಜೈಷ್- ಎ- ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಬಾಂಬ್ ಸ್ಫೋಟಗೊಂಡು ಮೃತಪಟ್ಟಿದ್ದಾನೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಆದರೆ ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ.
ದೃಢೀಕರಿಸದ ವರದಿಗಳ ಪ್ರಕಾರ, ಮೋಸ್ಟ್ ವಾಂಟೆಡ್ ಭಯೋತ್ಪಾದಕ ಕಂದಹಾರ್ ಹೈಜಾಕರ್ ಮಸೂದ್ ಅಜರ್ ಬೆಳಿಗ್ಗೆ 5 ಗಂಟೆಗೆ ಅಪರಿಚಿತ ವ್ಯಕ್ತಿಗಳು ನಡೆಸಿದ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ” ಎಂದು ಹೇಳಲಾಗಿದೆ.
ಇಂದು ಬೆಳಗ್ಗೆ 5 ಗಂಟೆಯ ವೇಳೆಗೆ ಭವಲ್ಪುರ ಮಸೀದಿ ಮುಂಭಾಗದಲ್ಲಿ ಬಾಂಬ್ ಸ್ಫೋಟಗೊಂಡಿದ್ದು, ಈ ವೇಳೆ ಅಲ್ಲೇ ಇದ್ದ ಮೌಲಾನಾ ಮಸೂದ್ ಅಜರ್ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ. ಅಪರಿಚಿತ ದುಷ್ಕರ್ಮಿಗಳು ಆತ ಕಾರ್ ಬಳಿ ಬರುತ್ತಿದ್ದಂತೆ ಮೊದಲೇ ಅಳವಡಿಸಲಾಗಿದ್ದ ಬಾಂಬ್ ಅನ್ನು ಸ್ಫೋಟಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
𝐍𝐞𝐰 𝐘𝐞𝐚𝐫 𝐆𝐢𝐟𝐭 𝐟𝐫𝐨𝐦 𝐔𝐧𝐤𝐧𝐨𝐰𝐧 𝐌𝐚𝐧🎉
BIG BREAKING NEWS – As per unconfirmed reports, Most wanted terrorist, Kandhar hijacker Masood Azhar, has been kiIIIed in a bomb expIosion by 𝐔𝐍𝐊𝐍𝐎𝐖𝐍 𝐌𝐄𝐍 at 5 am. pic.twitter.com/NCsntm0XTP
— Oxomiya Jiyori 🇮🇳 (@SouleFacts) January 1, 2024

