ಚಿಕ್ಕಬಳ್ಳಾಪುರದಲ್ಲಿ : ಚಿಕ್ಕಬಳ್ಳಾಪುರದಲ್ಲಿ 64 ವರ್ಷದ ವೈದ್ಯರೊಬ್ಬರಿಗೆ ಕೊರೊನಾ ಸೋಂಕು ಧೃಡವಾಗಿದೆ ಎಂದು ಸಚಿವ ಎಂಸಿ ಸುಧಾಕರ್ ಹೇಳಿಕೆ ನೀಡಿದ್ದಾರೆ.
ಇಂದು ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಎಂಸಿ ಸುಧಾಕರ್ ’64 ವರ್ಷದ ಮೂಳೆ ತಜ್ಞರಿಗೆ ಕೊರೊನಾ ಸೋಂಕು ತಗುಲಿರುವುದು ಧೃಡವಾಗಿದೆ. ಸದ್ಯ, ವೈದ್ಯರಿಗೆ ಹೋಮ್ ಕ್ವಾರಂಟೈನ್ ನಲ್ಲಿ ಇಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.ವೈದ್ಯರಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆ ಅವರ ಸಂಪರ್ಕದಲ್ಲಿದ್ದ ಜನರಿಗೆ ಆತಂಕ ಶುರುವಾಗಿದೆ.