ಬಾಲಿವುಡ್ ಅಂದ್ರೆ ಅದು ಭಾರತ ಚಿತ್ರರಂಗದ ಶ್ರೀಮಂತ ಸಿನಿಉದ್ಯಮ. ಇಲ್ಲಿ ಸಿನಿಮಾ ತಾರೆಯರು ಒಂದೊಂದು ಚಿತ್ರಕ್ಕೂ ಕೋಟಿ ಕೋಟಿ ಗಳಿಸುತ್ತಾರೆ. ಶಾರುಖ್ ಖಾನ್ ವಿಶ್ವದ ಶ್ರೀಮಂತ ನಟರಲ್ಲಿ ಒಬ್ಬರು. ಅವರಿಗೆ ಸುಹಾನಾ ಖಾನ್, ಆರ್ಯನ್ ಖಾನ್ ಮತ್ತು ಅಬ್ರಾಮ್ ಖಾನ್ ಎಂಬ ಮೂವರು ಮಕ್ಕಳಿದ್ದಾರೆ. ಇತ್ತೀಚೆಗೆ ಶಾಲೆಯ ವಾರ್ಷಿಕೋತ್ಸವದಲ್ಲಿ ಅಬ್ರಾಮ್ ಖಾನ್ ಮತ್ತು ಐಶ್ವರ್ಯ ರೈ ಪುತ್ರಿ ಆರಾಧ್ಯ ರೈ ಬಚ್ಚನ್ ಅವರ ಪ್ರದರ್ಶನದ ವೀಡಿಯೊಗಳು ವೈರಲ್ ಆಗುತ್ತಿವೆ.
ವೇದಿಕೆಯಲ್ಲಿ ತನ್ನ ಮಗನ ಪ್ರದರ್ಶನಕ್ಕೆ ಶಾರುಖ್ ಖಾನ್ ಅವರ ಭಾವನಾತ್ಮಕ ಪ್ರತಿಕ್ರಿಯೆಯೂ ವೈರಲ್ ಆಗುತ್ತಿದೆ. ಅಸಲಿಗೆ ಬಹುತೇಕ ಬಾಲಿವುಡ್ ಕಲಾವಿದರ ಮಕ್ಕಳೆಲ್ಲರೂ ಒಂದೇ ಶಾಲೆಯಲ್ಲಿ ಓದುತ್ತಾರೆಂದು ನಿಮಗೆ ತಿಳಿದಿದೆಯಾ? ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಬಹುತೇಕ ಎಲ್ಲಾ ಸ್ಟಾರ್ ಮಕ್ಕಳು ಓದುತ್ತಾರೆ. ಆರ್ಯನ್ ಖಾನ್‌ನಿಂದ ಹಿಡಿದು ಸಾರಾ ಅಲಿ ಖಾನ್‌ವರೆಗೆ ಎಲ್ಲರೂ ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದವರು.
ಮುಂಬೈನಲ್ಲಿ ಹೆಚ್ಚು ಹೆಸರುವಾಸಿಯಾಗಿರುವ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್ ನಲ್ಲಿ ಶುಲ್ಕ ತರಗತಿಯಿಂದ ತರಗತಿಗೆ ಬದಲಾಗುತ್ತದೆ. ಕಿಂಡರ್ ಗಾರ್ಟನ್ ನಿಂದ 7ನೇ ತರಗತಿವರೆಗೆ ಒಂದು ವರ್ಷದ ಶುಲ್ಕ 1.70 ಲಕ್ಷ ರೂ. ಮಾಸಿಕ ಶುಲ್ಕ ಸುಮಾರು 14,000 ರೂ. 8 ರಿಂದ 10 ನೇ ತರಗತಿಗಳಿಗೆ ವಾರ್ಷಿಕ ಶುಲ್ಕ 5.9 ಲಕ್ಷ ರೂ. 11 ಮತ್ತು 12 ನೇ ತರಗತಿಗಳ ಶುಲ್ಕ ಅಂದಾಜು 9.65 ಲಕ್ಷ ರೂ. ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್ ಅನ್ನು ಭಾರತದ ಪ್ರಮುಖ ಶಾಲೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
ಇದನ್ನು 2003 ರಲ್ಲಿ ಮುಖೇಶ್ ಅಂಬಾನಿಯವರ ಪತ್ನಿ ನೀತಾ ಅಂಬಾನಿ ಸ್ಥಾಪಿಸಿದರು. ಇದು 1,30,000 ಚದರ ಅಡಿಗಳಲ್ಲಿ ಹರಡಿದೆ ಮತ್ತು ಏಳು ಅಂತಸ್ತಿನ ಕಟ್ಟಡವಾಗಿದೆ. ಇದು ಸುಸಜ್ಜಿತ ತರಗತಿ ಕೊಠಡಿಗಳು, ಆಟದ ಮೈದಾನ, ಇಂಟರ್ನೆಟ್ ಸೌಲಭ್ಯ, ಎಸಿ ತರಗತಿ ಕೊಠಡಿಗಳು, ಟೆರೇಸ್ ಗಾರ್ಡನ್ ಮತ್ತು ಟೆನ್ನಿಸ್ ಕೋರ್ಟ್‌ಗಳಂತಹ ಆಧುನಿಕ ಸೌಲಭ್ಯಗಳನ್ನು ಹೊಂದಿದೆ. ಶಾಲೆಯು ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಅಗತ್ಯವಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಹಣಕಾಸಿನ ನೆರವು ನೀಡುತ್ತದೆ.
ಎರಡು ವರ್ಷಗಳ ಇಂಟರ್ನ್ಯಾಷನಲ್ ಬ್ಯಾಕಲೌರಿಯೇಟ್ ಡಿಪ್ಲೊಮಾ ಕಾರ್ಯಕ್ರಮವನ್ನು (IBDP) ನೀಡುತ್ತದೆ. ಇದು ಕೇಂಬ್ರಿಡ್ಜ್ ಅಸೆಸ್ಮೆಂಟ್ ಇಂಟರ್ನ್ಯಾಷನಲ್ ಎಜುಕೇಶನ್ (CAIE) ಮತ್ತು ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (CISCE) ನೊಂದಿಗೆ ಸಹ ಸಂಯೋಜಿತವಾಗಿದೆ. ಅಮೀರ್ ಖಾನ್ ಮತ್ತು ಕಿರಣ್ ರಾವ್ ಅವರ ಮಗ ಆಜಾದ್ ರಾವ್ ಖಾನ್ ಪ್ರಸ್ತುತ ಇದೇ ಶಾಲೆಯಲ್ಲಿ ಓದುತ್ತಿದ್ದಾನೆ. ಸಂಜಯ್ ಕಪೂರ್ ಮತ್ತು ಮಹೀಪ್ ಕಪೂರ್ ಅವರ ಮಗ ಜಹಾನ್ ಕಪೂರ್ ಕೂಡ ಪ್ರಸ್ತುತ ಧೀರೂಭಾಯಿ ಅಂಬಾನಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಓದುತ್ತಿದ್ದಾರೆ.