ಬೆಂಗಳೂರು: ಸಾವಯವ ನೈಸರ್ಗಿಕ ಕೃಷಿಗೆ ಸಹಕಾರ ನೀಡುವುದಾಗಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ.
ಆರ್ಟ್ ಆಫ್ ಲಿವಿಂಗ್ ಅಂತರರಾಷ್ಟ್ರೀಯ ಸಂಸ್ಥೆಯಲ್ಲಿ ಶನಿವಾರದಿಂದ ಆರಂಭವಾದ ಮೂರು ದಿನಗಳ ವಿಶ್ವ ಸಿರಿಧಾನ್ಯ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಸತತ ರಾಸಾಯನಿಕ ಬಳಕೆಯಿಂದ ಭೂಮಿ ಫಲವತ್ತತೆ ಕಳೆದುಕೊಂಡಿರುವುದರಿಂದ ಕಲುಷಿತ ಆಹಾರ ಉತ್ಪನ್ನಗಳು ಉತ್ಪಾದನೆ ಆಗುತ್ತಿದೆ. ಪರಿಸರ ಮತ್ತು ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂದು ಹೇಳಿದ್ದಾರೆ.
ಆರೋಗ್ಯವಂತ ಜೀವನಕ್ಕೆ ಸಾವಯವ ಆಹಾರದ ಧಾನ್ಯ, ಸಿರಿಧಾನ್ಯ ಮುಖ್ಯವಾಗಿದ್ದು, ರಾಸಾಯನಿಕ ಮುಕ್ತ ಉತ್ತಮ ಆರೋಗ್ಯ, ಆಹಾರ ಸೇವನೆ ಬಗ್ಗೆ ಜನ ಜಾಗೃತವಾಗುತ್ತಿದ್ದಾರೆ. ಸಿರಿಧಾನ್ಯ ಸಾವಯವ ಕೃಷಿಯಿಂದ ರೈತರಿಗೆ ಒಳ್ಳೆಯ ಲಾಭ ಸಿಗುತ್ತದೆ. ರೈತರು ಸಾವಯವ ನೈಸರ್ಗಿಕ ಕೃಷಿಯತ್ತ ಮುಖ ಮಾಡಿ ಸಿರಿಧಾನ್ಯ ಬೆಳೆಯಲು ಮುಂದಾಗಬೇಕಿದೆ ಎಂದು ಹೇಳಿದ್ದಾರೆ.