HomeKarnataka'ಗಳಿಸಿದ ಹಣದಲ್ಲಿ ನೂರಾರು ಜೀವಗಳಿಗೆ ನೆರವಾದ ಹೃದಯವಂತೆ ಲೀಲಾವತಿ' : ಸಿಎಂ ಸಿದ್ದರಾಮಯ್ಯ ಕಂಬನಿ

‘ಗಳಿಸಿದ ಹಣದಲ್ಲಿ ನೂರಾರು ಜೀವಗಳಿಗೆ ನೆರವಾದ ಹೃದಯವಂತೆ ಲೀಲಾವತಿ’ : ಸಿಎಂ ಸಿದ್ದರಾಮಯ್ಯ ಕಂಬನಿ

ಬೆಂಗಳೂರು : ಗಳಿಸಿದ ಹಣದಲ್ಲಿ ನೂರಾರು ಜೀವಗಳಿಗೆ ನೆರವಾದ ಹೃದಯವಂತೆ ಲೀಲಾವತಿ ಎಂದು ಸಿಎಂ ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ.

ಲೀಲಾವತಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಸಿಎಂ ಸಿದ್ದರಾಮಯ್ಯ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಕಂಬನಿಹಿರಿಯ ನಟಿ ಲೀಲಾವತಿ ಅವರ ಪಾರ್ಥಿವ ಶರೀರದ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದೆ.ನನ್ನ ವಿದ್ಯಾರ್ಥಿ ಜೀವನದಲ್ಲಿ ಲೀಲಾವತಿಯವರ ಚಲನಚಿತ್ರಗಳನ್ನು ನೋಡಿಕೊಂಡು ಬೆಳೆದವನು. ತನಗೆ ವಹಿಸುವ ಪ್ರತಿ ಪಾತ್ರಕ್ಕೂ ಜೀವತುಂಬುತ್ತಿದ್ದ ಓರ್ವ ಪರಿಪೂರ್ಣ ಕಲಾವಿದೆ. ಇಂದಿಗೂ ಅವರ ನಟನೆ ನನ್ನ ಕಣ್ಣೆದುರೇ ಇದ್ದಂತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಟನೆಯ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ತಾವು ಗಳಿಸಿದ ಹಣದಲ್ಲಿ ನೂರಾರು ಜೀವಗಳಿಗೆ ನೆರವಾದ ಹೃದಯವಂತೆ. ದಯೆಯೇ ಧರ್ಮದ ಮೂಲವಯ್ಯ ಎಂಬ ಮಾತನ್ನು ತಮ್ಮ ಬದುಕಿನಲ್ಲಿ ಯಥಾವತ್ತು ಅಳವಡಿಸಿಕೊಂಡಿದ್ದ ಲೀಲಾವತಿ ಅವರ ನಿಧನದಿಂದ ನನಗೆ ಅತೀವ ನೋವಾಗಿದೆ.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ವಿನೋದ್ ರಾಜ್ ಅವರಿಗೆ ದುಃಖ ಭರಿಸುವ ಶಕ್ತಿ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಭಾವುಕ  ಪೋಸ್ಟ್  ಹಂಚಿಕೊಂಡಿದ್ದಾರೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular