ಬೆಂಗಳೂರು : ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಶುಕ್ರವಾರ ನಿಗದಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಅವರು ಶಾಸಕಾಂಗ ಪಕ್ಷದ ಸಭೆ ಮುಂದೂಡಿಕೆಯಂತಹ ಬೆಳವಣಿಗೆ ಆಗಿಲ್ಲ. ಜೆ.ಪಿ.ನಡ್ಡಾ ಅವರಿಗೆ ಕರೆ ಮಾಡಿದ್ದೆ, ಇನ್ನೊಂದು ಗಂಟೆಯಲ್ಲಿ ತಿಳಿಸಲಿದ್ದಾರೆ ಎಂದರು.ಕೇಂದ್ರದ ವೀಕ್ಷಕರು ನವೆಂಬರ್ 16ರಂದು ಬರುತ್ತಾರಾ ಅಥವಾ ಶುಕ್ರವಾರ ಬರುತ್ತಾರಾ ಎಂಬುವುದು ಗೊತ್ತಿಲ್ಲ, ಯಾರು ಯಾರು ವೀಕ್ಷಕರು ಬರುತ್ತಾರೆ ಅಂತಾ ಜೆ.ಪಿ.ನಡ್ಡಾ ಅವರು ತಿಳಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.