HomeEntertainmentನಾಳೆ ತೆರೆ ಕಾಣಲಿದೆ 'ಜಲಪಾತ' ಸಿನಿಮಾ

ನಾಳೆ ತೆರೆ ಕಾಣಲಿದೆ ‘ಜಲಪಾತ’ ಸಿನಿಮಾ

ತನ್ನ ಟೈಟಲ್ ಮೂಲಕವೇ ಸಾಕಷ್ಟು ಸದ್ದು ಮಾಡಿರುವ ರಮೇಶ್ ಬೇಗಾರ್ ನಿರ್ದೇಶನದ ʼಜಲಪಾತʼ ಸಿನಿಮಾ ನಾಳೆ ರಾಜ್ಯದಲ್ಲಿ ತೆರೆ ಕಾಣಲಿದೆ. ಸಂಸ್ಕೃತಿ ಹಾಗೂ ಪರಿಸರದ ಕುರಿತ ಈ ಚಿತ್ರದ ಟ್ರೈಲರ್ ಈಗಾಗಲೇ ಪ್ರೇಕ್ಷಕರ ಗಮನ ಸೆಳೆದಿದೆ. ಪ್ರಮೋದ್ ಶೆಟ್ಟಿ ಸೇರಿದಂತೆ ರಜನೀಶ್, ಶಂಕರಮೂರ್ತಿ, ನಾಗಶ್ರೀ ಬೇಗಾರ್ ತೆರೆ ಹಂಚಿಕೊಂಡಿದ್ದಾರೆ.

ಶ್ರೀ ಎಂಟರ್ಪ್ರೈಸಸ್ ಬ್ಯಾನರ್ ನಡಿ ರವೀಂದ್ರ ತುಂಬರಮನೆ ಈ ಸಿನಿಮಾ ನಿರ್ಮಾಣ ಮಾಡಿದ್ದು, ಸಾಧ್ವಿನಿ ಕೊಪ್ಪ ಸಂಗೀತ ಸಂಯೋಜನೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶಶಿರಾ ಶೃಂಗೇರಿ ಛಾಯಾಗ್ರಹಣವಿದ್ದು, ಅವಿನಾಶ್ ಶೃಂಗೇರಿ ಸಂಕಲನವಿದೆ.ಈ ಚಿತ್ರದ ಹಾಡು  ಈಗಾಗಲೇ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿದೆ.

For Latest News Updates, Join Our Whatsapp Community🚩
RELATED ARTICLES

Most Popular