HomeKarnatakaBIG NEWS: ಅನುಕೂಲಕ್ಕೆ ತಕ್ಕಂತೆ ಕುರುಕ್ಷೇತ್ರವನ್ನೇ ತಿದ್ದಿದವರು ಏನು ಬೇಕಾದ್ರೂ ಮಾಡ್ತಾರೆ; ಮುನಿರತ್ನಗೆ ತಿರುಗೇಟು ನೀಡಿದ...

BIG NEWS: ಅನುಕೂಲಕ್ಕೆ ತಕ್ಕಂತೆ ಕುರುಕ್ಷೇತ್ರವನ್ನೇ ತಿದ್ದಿದವರು ಏನು ಬೇಕಾದ್ರೂ ಮಾಡ್ತಾರೆ; ಮುನಿರತ್ನಗೆ ತಿರುಗೇಟು ನೀಡಿದ ಸಂಸದ ಡಿ.ಕೆ.ಸುರೇಶ್

ರಾಮನಗರ: ಡಿ.ಕೆ.ಸುರೇಶ್ ಡಿಸ್ಟ್ರಿಬ್ಯೂಟರ್ ಎಂಬ ಬಿಜೆಪಿ ಶಾಸಕ ಮುನಿರತ್ನ ಹೇಳಿಕೆಗೆ ತಿರುಗೇಟು ನೀಡಿರುವ ಸಂಸದ ಡಿ.ಕೆ.ಸುರೇಶ್, ಅವರು ಪ್ರೊಡ್ಯೂಸರ್ ಆಗಿದ್ದಾಗ ನಾನು ಡಿಸ್ಟ್ರಿಬ್ಯೂಟ್ ಮಾಡುತ್ತಿರಲಿಲ್ಲ ಎಂದಿದ್ದಾರೆ.

ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಸುರೇಶ್, ಮುನಿರತ್ನ ಮಿಸ್ ಕಮ್ಯುನಿಕೇಷನ್ ಮಾಡಿದ್ದಾರೆ. ನಾನು ರಾಜಕಾರಣಕ್ಕೆ ಬರುವುದಕ್ಕಿಂತ ಮೊದಲು ಅವರು ಪ್ರೊಡ್ಯೂಸ್ ಮಾಡುತ್ತಿದ್ದರು. ನಾನು ಡಿಸ್ಟ್ರಿಬ್ಯೂಟ್ ಬಿಟ್ಟು ಎಕ್ಸಿಬ್ಯೂಷನ್ ಮಾಡುತ್ತಿದ್ದೇನೆ. ಅವರು ಡೈರೆಕ್ಷನ್ ಕೂಡ ಮಾಡುತ್ತಾರೆ ಎಂದು ಟಾಂಗ್ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅದೇನೋ ಮುನಿರತ್ನ ಕುರುಕ್ಷೇತ್ರ ಅಂತ ಮಾಡಿದ್ದರಲ್ಲಾ. ಅನುಕೂಲಕ್ಕೆ ತಕ್ಕಂತೆ ಕುರುಕ್ಷೇತ್ರ ತಿದ್ದಿದವರು ಏನು ಬೇಕಾದರು ಮಾಡುತ್ತಾರೆ ಎಂದು ಟೀಕಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular