HomeEntertainmentಹುಟ್ಟುಹಬ್ಬದ ಸಂಭ್ರಮದಲ್ಲಿ ಸಂಜನಾ ಗಲ್ರಾನಿ

ಹುಟ್ಟುಹಬ್ಬದ ಸಂಭ್ರಮದಲ್ಲಿ ಸಂಜನಾ ಗಲ್ರಾನಿ

ನಟಿ ಸಂಜನಾ ಗಲ್ರಾನಿ ಇಂದು ತಮ್ಮ 34ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 2005 ರಲ್ಲಿ ತೆರೆಕಂಡ ‘ಸೊಗ್ಗಡು’ ಎಂಬ ತೆಲುಗು ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪ್ರವೇಶಿಸಿದ ಸಂಜನಾ ಗಲ್ರಾನಿ 2006 ರಂದು ಸ್ಯಾಂಡಲ್ ವುಡ್ ನಲ್ಲಿ ‘ಗಂಡ ಹೆಂಡತಿ’ ಸಿನಿಮಾದಲ್ಲಿ ಅಭಿನಯಿಸಿದರು. ನಂತರ ನಾಯಕಿ ಸೇರಿದಂತೆ ಅತಿಥಿ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ.

ಕನ್ನಡದ ಬಿಗ್ ಬಾಸ್ ಮೊದಲನೇ ಸೀಸನ್ ನಲ್ಲಿ ಸ್ಪರ್ದಿ ಕೂಡ ಆಗಿದ್ದರು. ಕನ್ನಡ,  ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕನ್ನಡದಲ್ಲಿ ಕೊನೆಯದಾಗಿ ‘ದಂಡುಪಾಳ್ಯ’ 3 ರಲ್ಲಿ ನಟಿಸಿದ್ದ ಇವರು ಮತ್ಯಾವ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಕಾಲಿವುಡ್ ಚಿತ್ರರಂಗದಲ್ಲೇ ಬಿಜಿಯಾಗಿದ್ದಾರೆ. ಇಂದು ಸಾಮಾಜಿಕ ಜಾಲತಾಣದಲ್ಲಿ ಅವರ ಸ್ನೇಹಿತರಿಂದ ಹಾಗೂ ಸಿನಿ ತಾರೆಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular