alex Certify BIGG NEWS : 2023 ನೇ ಸಾಲಿನ `ದಸರಾ ಕ್ರೀಡಾಕೂಟ’ಗಳನ್ನು `ವಿಭಾಗ ಮಟ್ಟದಲ್ಲಿ’ ಆಯೋಜನೆ : ರಾಜ್ಯ ಸರ್ಕಾರದಿಂದ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIGG NEWS : 2023 ನೇ ಸಾಲಿನ `ದಸರಾ ಕ್ರೀಡಾಕೂಟ’ಗಳನ್ನು `ವಿಭಾಗ ಮಟ್ಟದಲ್ಲಿ’ ಆಯೋಜನೆ : ರಾಜ್ಯ ಸರ್ಕಾರದಿಂದ ಆದೇಶ

ಬೆಂಗಳೂರು : 2023 ನೇ ಸಾಲಿನ ದಸರಾ ಕ್ರೀಡಾಕೂಟದ ಸ್ಪರ್ಧೆಗಳನ್ನು ವಿಭಾಗ ಮಟ್ಟದಲ್ಲಿ ಆಯೋಜಿಸುವ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ಆದೇಶವನ್ನು ಹೊರಡಿಸಿದೆ. 

ಪ್ರಸ್ತುತ ಸಾಲಿನಲ್ಲಿ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟವನ್ನು ಹೊಸ ಮಾದರಿಯಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ, ಈ ಅಂಗವಾಗಿ ಎರಡು ಪ್ರತ್ಯೇಕ ಕ್ರೀಡಾಕೂಟಗಳು ನಡೆಯಲಿವೆ.

ಪ್ರತಿಭಾನ್ವೇಷಣಾ ದಸರಾ ಸಿ.ಎಂ. ಕಪ್-2023:

ಪ್ರತಿ ವರ್ಷದಂತೆ ತಾಲ್ಲೂಕು ಮಟ್ಟ, ಜಿಲ್ಲಾ ಮಟ್ಟ ಹಾಗೂ ವಿಭಾಗ ಮಟ್ಟಗಳಲ್ಲಿ ದಸರಾ ಕ್ರೀಡಾಕೂಟವನ್ನು ಆಯೋಜಿಸಿ, ವಿಭಾಗ ಮಟ್ಟದಲ್ಲಿ ಆಯ್ಕೆಯಾದವರಿಗೆ ದಿನಾಂಕ: 11-10-2023 ರಿಂದ 15-10-2023 ರವರೆಗೆ (ಕ್ರೀಡಾಪಟುಗಳು ಮೈಸೂರಿನಲ್ಲಿ ವರದಿ ಮಾಡಿಕೊಳ್ಳಬೇಕಾದ ದಿನಾಂಕ: 10-10-2023 ರ ಅಪರಾಹ್ನ) ಮೈಸೂರಿನಲ್ಲಿ ದಸರಾ ಕ್ರೀಡಾಕೂಟವನ್ನು ಆಯೋಜಿಸಲಾಗುವುದು.

ಒಲಿಂಪಿಕ್ ಮಾದರಿ ದಸರಾ ಸಿ.ಎಂ. ಕಪ್-2023:

ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಸಹಯೋಗದೊಂದಿಗೆ ವಿವಿಧ ರಾಜ್ಯ ಕ್ರೀಡಾ ಸಂಸ್ಥೆಗಳು ನಿಯೋಜಿಸುವ ಅತ್ಯುನ್ನತ 08 ಕ್ರೀಡಾಪಟುಗಳು/ಕ್ರೀಡಾ ತಂಡಗಳ ನಡುವೆ ಸ್ಪರ್ಧೆ ಒಳಗೊಂಡ ದಸರಾ ಸಿ.ಎಂ. ಕಪ್, ಕ್ರೀಡಾಕೂಟವನ್ನು ದಿನಾಂಕ: 16-10-2023 ರಿಂದ 21-10-2023 ರವರೆಗೆ ಮೈಸೂರಿನಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ. ಸದರಿ ಕ್ರೀಡಾಕೂಟದ ಆಯೋಜನೆಯ ಸಂಪೂರ್ಣ ವ್ಯವಸ್ಥೆಯನ್ನು ಕೇಂದ್ರ ಕಛೇರಿಯ ಮೂಲಕ ನಿರ್ವಹಿಸಲಾಗುವುದು.

ಜಿಲ್ಲೆಗಳಲ್ಲಿ ಆಯೋಜಿಸಲು ಆದೇಶಿಸಿದ. ವಿಭಾಗ ಮಟ್ಟದಲ್ಲಿ ಕ್ರೀಡಾಕೂಟ/ಆಯ್ಕೆ ಪ್ರಕ್ರಿಯೆ ಮೂಲಕ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಆಯ್ಕೆಯಾದ ಕ್ರೀಡಾಪಟುಗಳ ಸಂಪೂರ್ಣ ಮಾಹಿತಿಯನ್ನು ಅನುಬಂಧ-2 ರಲ್ಲಿ ಲಗತ್ತಿಸಲಾದ ನಮೂನೆಯಲ್ಲಿ ಕ್ರೀಡಾಪಟುಗಳಿಂದ ಭರ್ತಿ ಮಾಡಿಸಿ, ಸಂಬಂಧಿತ ಜಿಲ್ಲೆಯ ಉಪ/ಸಹಾಯಕ ನಿರ್ದೇಶಕರು ದೃಢೀಕರಿಸತಕ್ಕದ್ದು ಹಾಗೂ ಈ ದಾಖಲೆಯನ್ನು ತಮ್ಮ ಕಛೇರಿಯಲ್ಲಿ ಕಾಯ್ದಿರಿಸತಕ್ಕದ್ದು,

ವಿಭಾಗ ಮಟ್ಟದಿಂದ ರಾಜ್ಯ ಮಟ್ಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳ ಮಾಹಿತಿಯನ್ನು ದಸರಾ ಕ್ರೀಡಾಕೂಟದ ಅಧಿಕೃತ ಪೂರ್ಟಲ್‌ನಲ್ಲಿ ( https://www.dasaracmcup.com ) ಸಂಬಂಧಿತ ಉಪ/ಸಹಾಯಕ ನಿರ್ದೇಶಕರು, ಅಪ್‌ಲೋಡ್ ಮಾಡಬೇಕಾಗುವುದು. ವಿಭಾಗ ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸಿದ ಜಿಲ್ಲೆಯ ಉಪ/ಸಹಾಯಕ ನಿರ್ದೇಶಕರಿಗೆ ಅಧಿಕೃತ ಇ- ಮೇಲ್ ಮೂಲಕ User ID ಹಾಗೂ Password ಗಳನ್ನು ಒದಗಿಸಲಾಗುವುದು. ಕ್ರೀಡಾಪಟುಗಳ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವ ಪ್ರಕ್ರಿಯೆಯನ್ನು ದಿನಾಂಕ: 02-10-2023 ರೊಳಗೆ ಪೂರ್ಣಗೊಳಿಸತಕ್ಕದ್ದು. ಜಿಲ್ಲಾವಾರು ಅಪ್‌ಲೋಡ್ ಮಾಡಲಾದ ಮಾಹಿತಿಯನ್ನು ದಿನಾಂಕ: 25-09-2023 ರಿಂದ ಕಳಸಹಿದಾರರು ಪ್ರತಿದಿನ ಪರಾಮರ್ಶಿಸಲಿದ್ದು, ಅನಗತ್ಯ ವಿಳಂಭಕ್ಕೆ ಅವಕಾಶವಿರುವುದಿಲ್ಲ,

ಕ್ರೀಡಾಪಟುಗಳ ಮಾಹಿತಿ ಅಪ್‌ಲೋಡ್ ಮಾಡುವ ಅಧಿಕಾರಿಗಳು ತಮ್ಮ User ID ಹಾಗೂ Password ಗಳನ್ನು ಬಳಸುವ ಕುರಿತು ಎಚ್ಚರಿಕೆ ವಹಿಸತಕ್ಕದ್ದು ಹಾಗೂ ದುರ್ಬಳಕೆಗೆ ಅವಕಾಶ ನೀಡತಕ್ಕದ್ದಲ್ಲ. ಅನಧಿಕೃತ ವ್ಯಕ್ತಿಗಳ ಮಾಹಿತಿಯನ್ನು ಅಪ್‌ಲೋಡ್ ಮಾಡುವ ಮೂಲಕ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...