
ಹಂಗು ಜಿಲ್ಲೆಯ ಮಸೀದಿಯಲ್ಲಿ ಸ್ಫೋಟ ಸಂಭವಿಸಿದೆ ಎಂದು ದೋಬಾ ಪೊಲೀಸ್ ಠಾಣೆ ಎಸ್ಎಚ್ಒ ಶಹರಾಜ್ ಖಾನ್ ತಿಳಿಸಿದ್ದಾರೆ.
ಜುಮಾ ಪ್ರಾರ್ಥನೆಯ ಸಮಯದಲ್ಲಿ ಸ್ಫೋಟ ಸಂಭವಿಸಿದೆ, ಸ್ಫೋಟದ ಸಮಯದಲ್ಲಿ ಮಸೀದಿಯಲ್ಲಿ 30 ರಿಂದ 40 ಜನ ಇದ್ದರು ಎಂದು ಅವರು ಹೇಳಿದರು. “ಸ್ಫೋಟದ ಪರಿಣಾಮದಿಂದಾಗಿ ಮಸೀದಿಯ ಮೇಲ್ಛಾವಣಿ ಕುಸಿದಿದೆ” ಎಂದು ಹಂಗು ಜಿಲ್ಲಾ ಪೊಲೀಸ್ ಅಧಿಕಾರಿ ನಿಸಾರ್ ಅಹ್ಮದ್ ಹೇಳಿದ್ದಾರೆ.ಬಲೂಚಿಸ್ತಾನ ಪ್ರಾಂತ್ಯದ ಮಸ್ತುಂಗ್ ಜಿಲ್ಲೆಯ ಅಲ್ ಫಲಾಹ್ ರಸ್ತೆಯ ಮದೀನಾ ಮಸೀದಿ ಬಳಿ ನಡೆದ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ ಕನಿಷ್ಠ 52 ಜನರು ಸಾವನ್ನಪ್ಪಿ 50 ಕ್ಕೂ ಹೆಚ್ಚು ಜನರು ಗಾಯಗೊಂಡ ಕೆಲವೇ ಗಂಟೆಗಳ ನಂತರ ಈ ಸ್ಫೋಟ ಸಂಭವಿಸಿದೆ.

