HomeEntertainmentಆಟೋ ಚಾಲಕನೊಂದಿಗೆ ಕಿರಿಕ್; ಮಾರ್ಗ ಮಧ್ಯೆಯೇ ಇಳಿದು ಹಣ ಪಾವತಿಸದೇ ಬೇರೆ ಆಟೋ ಹತ್ತಿ ಹೋದ...

ಆಟೋ ಚಾಲಕನೊಂದಿಗೆ ಕಿರಿಕ್; ಮಾರ್ಗ ಮಧ್ಯೆಯೇ ಇಳಿದು ಹಣ ಪಾವತಿಸದೇ ಬೇರೆ ಆಟೋ ಹತ್ತಿ ಹೋದ ನಟಿ

ಬೆಂಗಳೂರು: ಆಟೋ ಬುಕ್ ಮಾಡಿ ಆಟೋ ಹತ್ತಿದ್ದ ಕಿರುತೆರೆ ನಟಿಯೊಬ್ಬರು ಮಧ್ಯದಾರಿಯಲ್ಲಿ ಕಿರಿಕ್ ತೆಗೆದು ಆಟೋದಿಂದ ಇಳಿದು ಹಣ ಪಾವತಿಸದೇ ಹೋದ ಘಟನೆ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ನಡೆದಿದೆ.

ಮಾರ್ಗ ಮಧ್ಯೆಯೇ ಆಟೋದಿಂದ ಇಳಿದು, ಜಗಳವಾಡಿ ಹಣ ಪಾವತಿಸದೇ ತೆರಳಿದ ಬಗ್ಗೆ ಆಟೋ ಚಾಲಕ ವಿಡಿಯೋ ಮಾಡಿ ಅಳಲು ತೋಡಿಕೊಂಡಿದ್ದಾನೆ. ಪುನರ್ ವಿವಾಹ ಸಿರಿಯಲ್ ನಟಿ ಪದ್ಮಿನಿ ಎಂಬುವವರು ಮಲ್ಲೇಶ್ವರಂ ಮಾರ್ಗೋಸಾ ರಸ್ತೆಯಿಂದ ಬನಶಂಕರಿವರೆಗೆ ಆಟೋ ಬುಕ್ ಮಾಡಿ ಹತ್ತಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೆಲ ದೂರ ಸಾಗುತ್ತಿದ್ದಂತೆ ಟ್ರಾಫಿಕ್ ಜಾಮ್ ಉಂಟಾಗಿದೆ. ಇದರಿಂದ ಆಟೋ ಚಾಲಕನ ವಿರುದ್ಧ ಸಿಟ್ಟಾದ ಪದ್ಮಿನಿ. ಯಾಕೆ ಈ ರಸ್ತೆಯಲ್ಲಿ ಕರೆತಂದಿದ್ದೀರಿ ಟ್ರ್ಯಾಫಿಕ್ ಹೆಚ್ಚಾಗಿದೆ. ನನಗೆ ಲೇಟ್ ಆಗುತ್ತಿದೆ ಎಂದು ಜಗಳ ಮಾಡಿದ್ದಾರೆ. ನಾನು ಆಟೋ ಇಳಿದು ಹೋಗುತ್ತೇನೆ ಎಂದು ತಕ್ಷಣ ಆಟೋದಿಂದ ಇಳಿದು ಬೇರೆ ಆಟೋ ಹತ್ತಿದ್ದಾರೆ.

ಕೂಡಲೇ ಆಟೋ ಚಾಲಕ ಕುಲ್ದೀಪ್, 437 ರೂಪಾಯಿ ಆಟೋ ಚಾರ್ಜ್ ಪಾವತಿಸುವಂತೆ ಹೇಳಿದ್ದಾರೆ. ಆದರೆ ಹಣ ಕೊಡಲ್ಲ ಎಂದು ವಾಗ್ವಾದ ನಡೆಸಿದ ನಟಿ, ನಾನು ಊಬರ್ ಗೆ ದೂರು ನೀಡುತ್ತೇನೆ ಎಂದು ಹಣ ಪಾವತಿಸದೇ ತೆರಳಿದ್ದಾರೆ. ಆಟೋ ಚಾಲಕ ಈ ಘಟನೆಯನ್ನು ವಿಡಿಯೋ ಮಾಡಿದ್ದು, ಹಣ ಕೊಡದೇ ಹೋಗಿದ್ದಾಗಿ ಅಳಲು ತೋಡಿಕೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular