HomeKarnatakaಪ್ರವಾಸಿಗರಿಗೆ ಸಿಹಿ ಸುದ್ದಿ: ಫೋಟೋ ಅಪ್ಲೋಡ್ ಮಾಡಿ ಉಚಿತ ಪ್ರವಾಸ ಗೆಲ್ಲಿ

ಪ್ರವಾಸಿಗರಿಗೆ ಸಿಹಿ ಸುದ್ದಿ: ಫೋಟೋ ಅಪ್ಲೋಡ್ ಮಾಡಿ ಉಚಿತ ಪ್ರವಾಸ ಗೆಲ್ಲಿ

ಬೆಂಗಳೂರು: ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸ ಫೋಟೋ ಸ್ಪರ್ಧೆ ಏರ್ಪಡಿಸಲಾಗಿದೆ. ಈ ಸ್ಪರ್ಧೆಯಲ್ಲಿ ವಿಜೇತರಾದ ಅತ್ಯುತ್ತಮ ಫೋಟೋಗಳಿಗೆ ಪ್ರವಾಸಿ ಸ್ಥಳಗಳಲ್ಲಿ ಉಚಿತವಾಗಿ ಉಳಿದುಕೊಳ್ಳುವ ಬಹುಮಾನ ಇರುತ್ತದೆ.

ಸ್ನೇಹಿತರು, ಕುಟುಂಬದ ಸದಸ್ಯರೊಂದಿಗೆ ರಾಜ್ಯದ ಯಾವುದೇ ಪ್ರವಾಸಿ ತಾಣಕ್ಕೆ ತೆರಳಿ ಫೋಟೋ ತೆಗೆಸಿಕೊಂಡು ಸೆ. 25ರೊಳಗೆ ತಾವು ತೆಗೆದ ಉತ್ತಮ ಫೋಟೋಗಳನ್ನು WTDkarnatakaCompetion ಹ್ಯಾಷ್ ಟ್ಯಾಗ್ ಬಳಸಿ ಜಾಲತಾಣದಲ್ಲಿ ಅಪ್ಲೋಡ್ ಮಾಡಬೇಕು. ಇದರೊಂದಿಗೆ @karnatakaworld ಖಾತೆ ಫಾಲೋ ಮಾಡಿ ಟ್ಯಾಗ್ ಮಾಡಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೆಚ್ಚು ಲೈಕ್ಸ್ ಮತ್ತು ಕಮೆಂಟ್ಸ್ ಪಡೆದ ಮೊದಲ ಮೂರು ಫೋಟೋಗಳನ್ನು ಪರಿಗಣಿಸಿ ವಿಜೇತರನ್ನು ಘೋಷಿಸಲಾಗುವುದು. ವಿಜೇತರಿಗೆ KSTDC ಮತ್ತು ಇತರೆ ಖಾಸಗಿ ಹೋಟೆಲ್ ಗಳಲ್ಲಿ ಒಂದು ದಿನ, ಎರಡು ರಾತ್ರಿ ಉಚಿತವಾಗಿ ವಾಸ್ತವ್ಯ ಕಲ್ಪಿಸಲಾಗುವುದು. ಸೆಪ್ಟೆಂಬರ್ 25ರೊಳಗೆ ಫೋಟೋ ಅಪ್ಲೋಡ್ ಮಾಡಲು ಅವಕಾಶವಿದೆ. ಅಂದು ಸಂಜೆ 6 ಗಂಟೆಗೆ ವಿಜೇತರನ್ನು ಘೋಷಣೆ ಮಾಡಲಾಗುವುದು ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular