HomeInternationalBIG UPDATE : ಮೊರಾಕೋ ಪ್ರಬಲ ಭೂಕಂಪ : ಮೃತಪಟ್ಟವರ ಸಂಖ್ಯೆ 600 ಕ್ಕೇರಿಕೆ

BIG UPDATE : ಮೊರಾಕೋ ಪ್ರಬಲ ಭೂಕಂಪ : ಮೃತಪಟ್ಟವರ ಸಂಖ್ಯೆ 600 ಕ್ಕೇರಿಕೆ

ವಾಷಿಂಗ್ಟನ್: ಮೊರಾಕ್ಕೊದಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 600 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಆಂತರಿಕ ಸಚಿವಾಲಯ ಮಾಹಿತಿ ನೀಡಿದೆ.

ಪ್ರವಾಸಿ ತಾಣ ಮರಕೇಶ್ನ ನೈಋತ್ಯಕ್ಕೆ 72 ಕಿಲೋಮೀಟರ್ (45 ಮೈಲಿ) ದೂರದಲ್ಲಿ ರಾತ್ರಿ 11:11 ಕ್ಕೆ (2211 ಜಿಎಂಟಿ) 6.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ವರದಿ ಮಾಡಿದೆ.

ಕರಾವಳಿ ನಗರಗಳಾದ ರಬಾತ್, ಕಾಸಾಬ್ಲಾಂಕಾ ಮತ್ತು ಎಸ್ಸೌಯಿರಾದಲ್ಲಿಯೂ ಪ್ರಬಲ ಭೂಕಂಪನದ ಅನುಭವವಾಗಿದೆ. ಭೀಕರ ಭೂಕಂಪದಲ್ಲಿ ಇನ್ನೂ 329 ಜನರು ಗಾಯಗೊಂಡಿದ್ದು, 51 ಜನರ ಸ್ಥಿತಿ ಗಂಭೀರವಾಗಿದೆ ಎಂದು ಸಚಿವಾಲಯ ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular