HomeKarnatakaSIR ವಿವಾದ ಮತ್ತಷ್ಟು ತೀವ್ರ ; FIR ಆಗುವವರೆಗೂ ಚುನಾವಣಾ ಆಯೋಗದ ಕಚೇರಿ ಬಿಡಲ್ಲ ಎಂದ...

SIR ವಿವಾದ ಮತ್ತಷ್ಟು ತೀವ್ರ ; FIR ಆಗುವವರೆಗೂ ಚುನಾವಣಾ ಆಯೋಗದ ಕಚೇರಿ ಬಿಡಲ್ಲ ಎಂದ ಡಿಕೆಶಿ!

ಬೆಂಗಳೂರು : ಎಸ್‌‍ಐಆರ್‌ ಪ್ರಕ್ರಿಯೆಯಲ್ಲಿ ಅಕ್ರಮವಾಗಿ ಸಾಮೂಹಿಕವಾಗಿ ಅರ್ಜಿ ನಮೂನೆ-7 ಅನ್ನು ಸಲ್ಲಿಸುತ್ತಿರುವವರ ವಿರುದ್ಧ ಎಫ್‌ಐಆರ್‌ ದಾಖಲಿಸಿ, ಸಮಗ್ರ ತನಿಖೆಗೆ ಆದೇಶಿಸುವವರೆಗೂ ಸಚಿವ ಸಂಪುಟ ಸಭೆಯನ್ನೂ ಬಿಟ್ಟು ತಾವೂ ಚುನಾವಣಾ ಆಯೋಗದ ಕಚೇರಿಯಲ್ಲಿ ಕುಳಿತುಕೊಳ್ಳುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಸುಮಾರು 60 ಲಕ್ಷಕ್ಕೂ ಅಧಿಕ ಮತದಾರರನ್ನು ಅರ್ಜಿ ನಮೂನೆ-7ರ ಅನುಸಾರ ಡಿಲಿಟ್‌ ಮಾಡಲು ಬೃಹತ್‌ ಸಂಚು ನಡೆದಿದೆ ಎಂದು ಆರೋಪಿಸಿದರು.

ತಾವು ಮುಖ್ಯಮಂತ್ರಿಯಾಗಿರುವವರೆಗೂ ಇದಕ್ಕೆ ಅವಕಾಶ ನೀಡುವುದಿಲ್ಲ. ಅರ್ಹ ಮತದಾರರ ಹಕ್ಕುಗಳನ್ನು ರಕ್ಷಿಸುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ಪ್ರತಿಜ್ಞೆ ಮಾಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಖಾಲಿ ಇರುವ ಅರ್ಜಿ ನಮೂನೆ-7 ಎಲ್ಲರಿಗೂ ಸುಲಭವಾಗಿ ಲಭ್ಯವಾಗುತ್ತದೆ. ಆದರೆ ರಾಜ್ಯಾದ್ಯಂತ ತಾವು ಕ್ಷೇತ್ರವಾರು ಸಂಗ್ರಹಿಸಿರುವ ಮಾಹಿತಿಯ ಪ್ರಕಾರ ಮುದ್ರಿತ ಅರ್ಜಿ ನಮೂನೆಗಳು ಸಲ್ಲಿಕೆಯಾಗಿವೆ. ಅದರಲ್ಲಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ಸಮುದಾಯಕ್ಕೆ ಸೇರಿದ ಮತದಾರರ ಹೆಸರು, ಗುರುತಿನ ಚೀಟಿಯಲ್ಲಿನ ಸಂಖ್ಯೆಯೊಂದಿಗೆ ಮುದ್ರಿತ ನಮೂನೆ-7ಗಳನ್ನು ಬಿಎಲ್‌ಓಗಳಿಗೆ ಸಲ್ಲಿಸಲಾಗಿದೆ.

ಈ ರೀತಿ 7 ರಿಂದ 10 ಸಾವಿರ ನಮೂನೆ-7 ಅರ್ಜಿಗಳು ಪ್ರತಿಯೊಂದು ಕ್ಷೇತ್ರಕ್ಕೂ ಸಲ್ಲಿಕೆಯಾಗಿವೆ. ಕೆಲವು ಖಾಸಗಿ ವ್ಯಕ್ತಿಗಳು ಸಾವಿರಾರು ಮುದ್ರಿತ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಇವರಿಗೆ ದತ್ತಾಂಶಗಳನ್ನು ಯಾರು ಒದಗಿಸಿದ್ದಾರೆ ಎಂದು ಪ್ರಶ್ನಿಸಿದರು.

ಕೆಲವು ಪ್ರಕರಣಗಳಲ್ಲಿ ಎಸ್‌‍ಐಆರ್‌ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲೇ ಮುದ್ರಿತ ಅರ್ಜಿ ನಮೂನೆ-7 ಸಲ್ಲಿಕೆಯಾಗಿವೆ. ಬಿಜೆಪಿಯ ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ಇಂತಹ ಅರ್ಜಿ ನಮೂನೆಗಳನ್ನು ಮುದ್ರಿಸಿ, ಅವರದೇ ಪಕ್ಷದ ಕಾರ್ಯಕರ್ತರು ಹಾಗೂ ಆರ್‌ಎಸ್‌‍ಎಸ್‌‍ನವರಿಗೆ ತಲುಪಿಸುತ್ತಿದ್ದಾರೆ. ಅಲ್ಲಿಂದ ಬಿಎಲ್‌ಒಗಳಿಗೆ ಸಲ್ಲಿಕೆ ಮಾಡಲಾಗುತ್ತಿದೆ ಎಂದು ಹೇಳಿದರು.

ಕೆಲವು ಕಡೆ ಈ ರೀತಿ ಅರ್ಜಿನಮೂನೆಗಳನ್ನು ಸ್ವೀಕರಿಸಿರುವ ಬಿಎಲ್‌ಒಗಳು ಬಿಜೆಪಿಯವರಿಗೆ ತಿಳುವಳಿಕೆ ಹೇಳಿದ್ದಾರೆ. ಸಾಮೂಹಿಕವಾಗಿ ಈ ರೀತಿ ಅರ್ಜಿ ನೀಡಿದರೆ, ಅದನ್ನು ಪರಿಗಣಿಸಲು ಸಾಧ್ಯವಿಲ್ಲ ಮತ್ತು ಅದು ಚುನಾವಣೆ ವ್ಯವಸ್ಥೆಯನ್ನು ದಿಕ್ಕು ತಪ್ಪಿಸುವ ಷಡ್ಯಂತ್ರ ಎಂದು ಭಾವಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ತಕ್ಷಣವೇ ಕೆಲವರು ತಾವು ನೀಡಿದ ಅರ್ಜಿ ನಮೂನೆಗಳನ್ನು ಹಿಂಪಡೆದು ಕ್ಷಮೆ ಕೇಳಿದ್ದಾರೆ ಎಂದು ಹೇಳಿದರು.

ಚುನಾವಣಾ ಆಯೋಗದಲ್ಲಿ ದೂರು

ಇಂದು ತಾವು ಸಂಪುಟದ ಎಲ್ಲಾ ಸಚಿವರೊಂದಿಗೆ ಚುನಾವಣಾ ಆಯೋಗದ ರಾಜ್ಯ ಮುಖ್ಯ ಅಧಿಕಾರಿಗಳ ಕಚೇರಿಗೆ ತೆರಳುತ್ತಿದ್ದೇನೆ. ಅಲ್ಲಿ ದಾಖಲೆಗಳ ಸಹಿತ ಲಿಖಿತ ದೂರು ಸಲ್ಲಿಸುತ್ತೇನೆ ಎಂದರು.

ಚುನಾವಣಾ ಆಯೋಗದ ಅಕ್ರಮದ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಬೇಕು. ಕೂಡಲೇ ನಿಯಮ ಬಾಹಿರವಾಗಿ ಅರ್ಜಿ ನಮೂನೆಗಳನ್ನು ಸಲ್ಲಿಸಿರುವವರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಆದೇಶಿಸಬೇಕು ಮತ್ತು ತಪ್ಪಿತಸ್ಥರನ್ನು ಬಂಧಿಸಬೇಕು. ಆ ವರೆಗೂ ತಾವು ಆಯೋಗದ ಕಚೇರಿ ಬಿಟ್ಟು ಹೊರ ಬರುವುದಿಲ್ಲ ಎಂದು ಹೇಳಿದರು.

ಇಂದು ಮಧ್ಯಾಹ್ನ ಸಚಿವ ಸಂಪುಟ ಸಭೆಯಿದೆ. ಅದಕ್ಕಿಂತಲೂ ಮುಖ್ಯವಾಗಿ ತಮಗೆ ಜನರ ಮತದಾನದ ಹಕ್ಕು ಆದ್ಯತೆಯಾಗಿದೆ ಎಂದರು.

ಆರೋಪಗಳ ತನಿಖೆ ಮತ್ತು ಕಾರಣ

ಈ ರೀತಿಯ ಅರ್ಜಿ ನಮೂನೆಗಳನ್ನು ಎಲ್ಲಿ, ಯಾರೂ ಮುದ್ರಿಸುತ್ತಿದ್ದಾರೆ. ಇಂತಹ ದೇಶ ದ್ರೋಹದ ಕೃತ್ಯದಲ್ಲಿ ಭಾಗವಹಿಸುವವರ ಕುರಿತು ತನಿಖೆಯಾಗಲೇಬೇಕು ಎಂದು ಹೇಳಿದರು.

ಈ ಬಗ್ಗೆ ನಾನು ನಿನ್ನೆ ರಾತ್ರಿಯೇ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದೇನೆ. ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರಿಗೆ ಇದು ಗೊತ್ತಿಲ್ಲವೇ ಎಂದು ಪ್ರಶ್ನಿಸಿದ ಅವರು, ಎಸ್‌‍ಐಆರ್‌ ದೇಶದ ದೊಡ್ಡ ವಂಚನೆ ಎಂದು ಹೇಳಿದರು.

ಕ್ಷೇತ್ರವಾರು ಅರ್ಜಿ ನಮೂನೆ-7 ಸಲ್ಲಿಕೆಯ ಬಗ್ಗೆ ಡಿ.ಕೆ.ಶಿವಕುಮಾರ್‌ ದಾಖಲಾತಿಗಳ ಸಮೇತ ಮಾಹಿತಿ ನೀಡಿದರು.

ಸಚಿವರಾದ ಈಶ್ವರ್‌ ಖಂಡ್ರೆ, ಎಂ.ಬಿ.ಪಾಟೀಲ್‌ ಮತ್ತಿತರರು ಅರ್ಜಿ ನಮೂನೆ-7ರ ಅಕ್ರಮಗಳ ಬಗ್ಗೆ ಸಮಗ್ರ ವಿವರಣೆ ನೀಡಿ ಬಿಜೆಪಿ ನಾಯಕರು ಇಂತಹ ಅರ್ಜಿಗಳನ್ನು ನೀಡಿದ್ದಾರೆ. ಆಯೋಗದ ಅಧಿಕಾರಿಗಳು ಎಚ್ಚರಿಕೆ ನೀಡಿದಾಕ್ಷಣ ಮುಚ್ಚಳಿಕೆ ಬರೆದುಕೊಟ್ಟು ತಾವು ನೀಡಿದ ಅರ್ಜಿಗಳನ್ನು ವಾಪಸ್‌‍ ತೆಗೆದುಕೊಂಡು ಹೋಗಿದ್ದಾರೆ ಎಂದು ವಿವರಿಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular