HomeInternationalBIG NEWS: G-20 ಶೃಂಗಸಭೆಗೆ ಮತ್ತೊಬ್ಬ ನಾಯಕ ಗೈರು; ಕೋವಿಡ್ ಕಾರಣಕ್ಕೆ ಆಗಮಿಸುತ್ತಿಲ್ಲವೆಂದ ಸ್ಪೇನ್ ಅಧ್ಯಕ್ಷ...!

BIG NEWS: G-20 ಶೃಂಗಸಭೆಗೆ ಮತ್ತೊಬ್ಬ ನಾಯಕ ಗೈರು; ಕೋವಿಡ್ ಕಾರಣಕ್ಕೆ ಆಗಮಿಸುತ್ತಿಲ್ಲವೆಂದ ಸ್ಪೇನ್ ಅಧ್ಯಕ್ಷ…!

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಗೆ ಈಗ ಮತ್ತೊಬ್ಬ ವಿಶ್ವ ನಾಯಕ ಗೈರಾಗುತ್ತಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಪಿಂಗ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಈಗಾಗಲೇ ಗೈರಾಗುವುದಾಗಿ ತಿಳಿಸಿದ್ದು, ಇದೀಗ ಸ್ಪೇನ್ ಅಧ್ಯಕ್ಷರೂ ಸಹ ಆಗಮಿಸುತ್ತಿಲ್ಲ ಎಂದು ತಿಳಿದುಬಂದಿದೆ.

ಸ್ಪೇನ್ ಅಧ್ಯಕ್ಷ ಪೆಡ್ರೋ ಸಾಂಚೆಜ್ ಅವರಿಗೆ ಕೋವಿಡ್ ಸೋಂಕು ತಗುಲಿರುವ ಕಾರಣ ನವದೆಹಲಿಯಲ್ಲಿ ನಡೆಯುವ ಜಿ20 ಶೃಂಗಸಭೆಯಲ್ಲಿ ಭಾಗವಹಿಸುತ್ತಿಲ್ಲ ಎಂದು ತಿಳಿದು ಬಂದಿದ್ದು, ಸ್ವತಃ ಅಧ್ಯಕ್ಷ ಪೆಡ್ರೋ ಸಾಂಚೆಜ್ ಅವರೇ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಈ ವಿಷಯ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಮಗೆ ಕೋವಿಡ್ ಸೋಂಕು ತಗುಲಿರುವ ಕಾರಣ ನವದೆಹಲಿಯಲ್ಲಿ ನಡೆಯುವ ಜಿ20 ಶೃಂಗಸಭೆಯಲ್ಲಿ ಭಾಗವಹಿಸುತ್ತಿಲ್ಲ ಎಂದು ತಿಳಿಸಿರುವ ಅವರು, ಉಪಾಧ್ಯಕ್ಷ ನಾಡಿಯ ಕೆಲ್ವಿನೋ ಹಾಗೂ ವಿದೇಶಾಂಗ ಸಚಿವರು ಸ್ಪೇನ್ ದೇಶವನ್ನು ಪ್ರತಿನಿಧಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular