HomeAgricultureಕೆಜಿ ಟೊಮ್ಯಾಟೋ ಬೆಲೆ ಎಷ್ಟು ಅಂತ ತಿಳಿದ್ರೆ ಶಾಕ್ ಆಗ್ತೀರಾ....!

ಕೆಜಿ ಟೊಮ್ಯಾಟೋ ಬೆಲೆ ಎಷ್ಟು ಅಂತ ತಿಳಿದ್ರೆ ಶಾಕ್ ಆಗ್ತೀರಾ….!

Tomato Price Down : ಪಾತಾಳಕ್ಕೆ ಇಳಿಯುತ್ತಿರುವ ಟೊಮ್ಯಾಟೋ ಬೆಲೆ: ಕೆಜಿಗೆ 10 ಕನಿಷ್ಠಕ್ಕೆ ಇಳಿಯೋ ಹೊತ್ತು...

ಕೆಲ ತಿಂಗಳ ಹಿಂದೆ ಟೊಮೆಟೊ ಬೆಲೆ ಮುಗಿಲು ಮುಟ್ಟಿದ ಕಾರಣ ಗ್ರಾಹಕರು ಕಂಗಾಲಾಗುವಂತೆ ಆಗಿತ್ತು. ಕೈಕೊಟ್ಟ ಮಳೆ, ಸಕಾಲಕ್ಕೆ ಬಾರದ ಬೆಳೆ ಮೊದಲಾದ ಕಾರಣಗಳಿಂದ ಟೊಮೆಟೊ ಬೆಲೆ ಕೈಗೆಟುಕದಂತಾಗಿತ್ತು.

ಇದೀಗ ಮಾರುಕಟ್ಟೆಗೆ ಟೊಮೆಟೊ ಎಂದಿನಂತೆ ಸರಬರಾಜಾಗುತ್ತಿದ್ದು, ಬೆಲೆ ಇನ್ನಿಲ್ಲದಂತೆ ಕುಸಿತ ಕಂಡಿದೆ. ಗುರುವಾರದಂದು ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ಅತ್ಯಂತ ಕಡಿಮೆ ಬೆಲೆಗೆ ಹರಾಜಾಗಿದ್ದು, ರೈತರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗುರುವಾರದ ಹರಾಜಿನಲ್ಲಿ 15 ಕೆಜಿ ನಾಟಿ ಟೊಮೆಟೊ ಬಾಕ್ಸ್ ಕನಿಷ್ಠ 50 ಹಾಗೂ ಗರಿಷ್ಠ 150 ರೂಪಾಯಿಗಳಿಗೆ ಮಾರಾಟವಾಗಿದ್ದರೆ, ಕಡಿಮೆ ಗುಣಮಟ್ಟದ ಕೆಜಿ ಟೊಮೆಟೊಗೆ ಕನಿಷ್ಠ 3 ರೂಪಾಯಿ ಹಾಗೂ ಗುಣಮಟ್ಟದ ಟೊಮೆಟೊಗೆ ಗರಿಷ್ಠ 10 ರೂಪಾಯಿ ಬೆಲೆ ಸಿಕ್ಕಿದೆ.

For Latest News Updates, Join Our Whatsapp Community🚩
RELATED ARTICLES

Most Popular