
ಸುದ್ದಿಗಾರರ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ‘ಶಾಸಕ ಆರ್. ಅಶೋಕ್ ಗೆ ಸ್ವಲ್ಪ ಪ್ರಾಬ್ಲಂ ಇದೆ. ರಾಜಕೀಯ ಪ್ರಜ್ಞೆ, ಸಮಯ ಪ್ರಜ್ಞೆ ಎಲ್ಲವೂ ನಮಗೆ ಇದೆ. ಸರ್ಕಾರದ ವತಿಯಿಂದ ಪ್ರಧಾನಿ ಮೋದಿ ಸ್ವಾಗತ ಮಾಡಿಸಿದ್ದೇವೆ. ಯಾರಿಗೆ ಎಷ್ಟು ಗೌರವ ಕೊಡಬೇಕು ಅಂತಾ ನಮಗೆ ಗೊತ್ತಿದೆ, ಪ್ರಧಾನಮಂತ್ರಿ ಕಚೇರಿಯಿಂದ ನಮಗೆ ಕರೆ ಬಂದಿತ್ತು. ಕೇಂದ್ರ ಸರ್ಕಾರವೇ ಬರೋದು ಬೇಡ ಅಂತಾ ನಮಗೆ ಹೇಳಿತ್ತು ಎಂದು ಡಿಸಿಎಂ ಡಿಕೆ ಶಿವಕುಮಾರ್ ಡಿಚ್ಚಿ ನೀಡಿದ್ದಾರೆ.
ಬೇರೆ ರಾಜ್ಯಗಳ ರೀತಿ ಅಲ್ಲ ನಮ್ಮ ಸಂಸ್ಕೃತಿ. ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ನಾವು ಪ್ರಧಾನಿಗೆ ಗೌರವ ಕೊಡುತ್ತೇವೆ, ಶಾಸಕ ಆರ್. ಅಶೋಕ್ ಗೆ ಸ್ವಲ್ಪ ಪ್ರಾಬ್ಲಂ ಇದೆ . ಅಶೋಕ್ ಸುಖಾ ಸುಮ್ಮನೆ ಆರೋಪ ಮಾಡಬಾರದು ಎಂದು ತಿರುಗೇಟು ನೀಡಿದರು.

