HomeKarnatakaBIG NEWS: ಬಿಜೆಪಿಗರು ಬೀದಿಪಾಲು ಎಂದ ಕೈ ನಾಯಕರು; ಕಾಂಗ್ರೆಸ್ ಗೆ ಅಧಿಕಾರ ಕೊಟ್ಟಿದ್ದು ಬೆಳಿಗ್ಗೆ...

BIG NEWS: ಬಿಜೆಪಿಗರು ಬೀದಿಪಾಲು ಎಂದ ಕೈ ನಾಯಕರು; ಕಾಂಗ್ರೆಸ್ ಗೆ ಅಧಿಕಾರ ಕೊಟ್ಟಿದ್ದು ಬೆಳಿಗ್ಗೆ ಎದ್ದು ಮರ-ಗಿಡದ ಮೇಲೆ ಕುಳಿತು ಕಾ..ಕಾ…ಅನ್ನೋದಿಕ್ಕಲ್ಲ ಎಂದು ತಿರುಗೇಟು ನೀಡಿದ ಸಂಸದ ಪ್ರತಾಪ್ ಸಿಂಹ


ಮೈಸೂರು: ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಭೇಟಿ ನೀಡಿದಾಗ ಬಿಜೆಪಿ ನಾಯಕರು ಬ್ಯಾರಿಕೇಡ್ ಗಳ ಹಿಂದೆ ನಿಂತಿದ್ದ ವಿಚಾರವಾಗಿ ವ್ಯಂಗ್ಯವಾಡಿರುವ ರಾಜ್ಯ ಕಾಂಗ್ರೆಸ್, ಬಿಜೆಪಿ ನಾಯಕರು ಬೀದಿಪಾಲಾಗಿದ್ದಾರೆ ಎಂದು ಲೇವಡಿ ಮಾಡಿದೆ. ಕಾಂಗ್ರೆಸ್ ಹೇಳಿಕೆ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದು, ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಪ್ರಧಾನಿ ಅವರ ಬಳಿ ಎಲ್ಲರನ್ನೂ ಬಿಡಲು ಆಗಲ್ಲ, ಸೆಕ್ಯೂರಿಟಿ ಸಮಸ್ಯೆ ಇರುತ್ತದೆ ಹಾಗಾಗಿ ಹೊರಗಡೆ ನಿಂತಿದ್ದೆವು ಎಂದು ಸಮಜಾಯಿಷಿ ನೀಡಿದ್ದಾರೆ.

ಜನ ಕಾಂಗ್ರೆಸ್ ಗೆ 5 ವರ್ಷ ಅಧಿಕಾರ ಕೊಟ್ಟದ್ದು ಬೆಳಿಗ್ಗೆ ಎದ್ದು ಮರ, ಗಿಡಗಳ ಮೇಲೆ ಕುಳಿತು ಕಾ..ಕಾ…ಅನ್ನೋದಿಕ್ಕಲ್ಲ, ಮೊದಲು ಕಾಂಗ್ರೆಸ್ ನವರಿಗೆ ಕೆಲಸ ಮಾಡಲು ಹೇಳಿ ಎಂದು ಗುಡುಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular