
ಮೃತರನ್ನು ತಂದೆ ಪುಟ್ಟರಾಜು(42), ಮಗ ಕೇಶವ(14) ಎಂದು ಗುರುತಿಸಲಾಗಿದೆ. ವರಮಹಾಲಕ್ಷ್ಮೀ ಹಬ್ಬ ಇರುವುದರಿಂದ ತಾವರೆ ಹೂ ಬೇಕೆಂದು ಹೂ ಕೀಳಲು ಕೆರೆದ ಇಳಿದ ತಂದೆ ಇಬ್ಬರು ಕೂಡ ಸಾವನ್ನಪ್ಪಿದ್ದಾರೆ. ಕೆಸರಿನಲ್ಲಿ ಸಿಲುಕಿ ಇಬ್ಬರು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಹಬ್ಬದ ವೇಳೆಯೇ ಈ ಘೋರ ದುರಂತ ನಡೆದಿರುವುದು ನಿಜಕ್ಕೂ ಅಘಾತಕಾರಿ ವಿಚಾರ. ಬುಧವಾರ ಸಂಜೆ ಭೂಚನಹಳ್ಳಿ ಬಳಿಯ ಕೆರೆಗೆ ತಾವರೆ ಹೂ ಕೀಳಲು ಪುಟ್ಟರಾಜು ಮತ್ತು ಕೇಶವ್ ಜೊತೆಯಾಗಿ ಹೋಗಿದ್ದರು. ಮೃತರು ದೊಡ್ಡಬಳ್ಳಾಪುರ ಶಾಂತಿನಗರದ ನಿವಾಸಿಗಳು ಎಂದು ತಿಳಿದು ಬಂದಿದೆ, ಇಂದು ಬೆಳಗ್ಗೆ ಅಗ್ನಿಶಾಮಕದಳದ ಸಿಬ್ಬಂದಿ ಕೆರೆಯಿಂದ ಮೃತದೇಹಗಳನ್ನು ಹೊರಗೆ ತೆಗೆದಿದ್ದಾರೆ. ಮೃತಪಟ್ಟವರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು, ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

