HomeIndiaಚಲಿಸುತ್ತಿದ್ದ ರೈಲು ಹತ್ತಲು ಹೋಗಿ ದುರಂತ; ಎರಡೂ ಕಾಲುಗಳನ್ನೇ ಕಳೆದುಕೊಂಡ ಯುವಕ

ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ದುರಂತ; ಎರಡೂ ಕಾಲುಗಳನ್ನೇ ಕಳೆದುಕೊಂಡ ಯುವಕ

ಮುಂಬೈ: ಮಹಾರಾಷ್ಟ್ರದ ನಾಂದೇಡ್ ರೈಲು ನಿಲ್ದಾಣದಲ್ಲಿ ದುರಂತವೊಂದು ಸಂಭವಿಸಿದೆ. ಪ್ರಯಾಣಿಕರು ರೈಲುಗಳನ್ನು ಹತ್ತುವಾಗ ಹಾಗೂ ಇಳಿಯುವಾಗ ಎಷ್ಟು ಎಚ್ಚರವಾಗಿದ್ದರೂ ಕಡಿಮೆಯೇ. ಒಮ್ಮೊಮ್ಮೆ ಗಡಿಬಿಡಿಯಲ್ಲಿ ರೈಲು ಹತ್ತಲು ಅಥವಾ ಇಳಿಯಲು ಹೋಗಿ ಎಂತಹ ದುರಂತಗಳು ಸಂಭವಿಸುತ್ತವೆ ಎಂಬುದಕ್ಕೆ ಈ ಘಟನೆ ಕೂಡ ಸಾಕ್ಷಿ.

ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಕೆಳಗೆ ಬಿದ್ದ ಯುವಕ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡಿರುವ ಘಟನೆ ನಾಂದೇಡ್ ನಲ್ಲಿ ನಡೆದಿದೆ. ನಾಂದೇಡ್ ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲು ಹತ್ತಲು ಯುವಕ ಮಹೇಶ್ ಕನ್ನೇಕರ್ ಯತ್ನಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೈಲು ಕೆಲ ಕಾಲ ನಿಂತಿದ್ದರೂ ಆಗ ರೈಲನ್ನು ಹತ್ತದೇ ರೈಲು ಚಲಿಸಲು ಶುರುವಾಗುತ್ತಿದ್ದಂತೆ ಯುವಕ ರೈಲು ಹತ್ತಲು ಹೋಗಿದ್ದಾನೆ. ಈ ವೇಳೆ ರೈಲು ಹಾಗೂ ಪ್ಲಾಟ್ ಫಾರ್ಮ್ ನಡುವೆ ಸಿಲುಕಿಕೊಂಡ ಯುವಕ ಜಾರಿ ಬಿದ್ದಿದ್ದಾನೆ. ಈ ವೇಳೆ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾರೆ.

ಯುವಕ ಮಹೇಶ್ ನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕಿನ್ವಾಟ್ ನಲ್ಲಿನ ಗೋಕುಂದ ಅಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಹೆಚ್ಚಿನ ಚಿಕಿತ್ಸೆ ಅಗತ್ಯ ಹಿನ್ನೆಲೆಯಲ್ಲಿ ಅವರನ್ನು ಆದಿಲಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular