HomeIndiaBIG NEWS: ವಕೀಲನ ವೇಷದಲ್ಲಿ ಬಂದ ಯುವಕನಿಂದ ಸಮಾಜವಾದಿ ಪಕ್ಷದ ಮುಖಂಡನ ಮೇಲೆ 'ಚಪ್ಪಲಿ' ಎಸೆತ;...

BIG NEWS: ವಕೀಲನ ವೇಷದಲ್ಲಿ ಬಂದ ಯುವಕನಿಂದ ಸಮಾಜವಾದಿ ಪಕ್ಷದ ಮುಖಂಡನ ಮೇಲೆ ‘ಚಪ್ಪಲಿ’ ಎಸೆತ; ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ವಿವಾದಾತ್ಮಕ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರ ಮೇಲೆ ಯುವಕನೊಬ್ಬ ಇಂದು ಚಪ್ಪಲಿ ಎಸೆದಿದ್ದಾನೆ. ಸಮಾಜವಾದಿ ಪಕ್ಷದ ಹಿಂದುಳಿದ ವರ್ಗಗಳ ಸಭೆಯನ್ನು ಲಕ್ನೋದಲ್ಲಿ ಏರ್ಪಡಿಸಿದ್ದ ವೇಳೆ ಈ ಘಟನೆ ನಡೆದಿದೆ.

ಸಭೆ ನಡೆಯುತ್ತಿದ್ದಾಗ ವಕೀಲನ ವೇಷ ಧರಿಸಿ ಬಂದಿದ್ದ ಈ ಯುವಕ ಏಕಾಏಕಿ ಚಪ್ಪಲಿ ಎಸೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ನಡೆಯುತ್ತಿದ್ದಂತೆ ಆಕ್ರೋಶಗೊಂಡ ಸಮಾಜವಾದಿ ಪಕ್ಷದ ಕಾರ್ಯಕರ್ತರು ಆತನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಈ ಯುವಕ ಯಾವ ಕಾರಣಕ್ಕೆ ಸ್ವಾಮಿ ಪ್ರಸಾದ್ ಮೌರ್ಯ ಅವರ ಮೇಲೆ ಚಪ್ಪಲಿ ಎಸೆದಿದ್ದಾನೆ ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಕೃತ್ಯ ಎಸಗುತ್ತಿದ್ದಂತೆ ಆತ ಮಾಧ್ಯಮ ಪ್ರತಿನಿಧಿಗಳ ಬಳಿ ಮಾತನಾಡಲು ಯತ್ನಿಸಿದ್ದು, ಆದರೆ ಆತನನ್ನು ಹಿಡಿದು ಥಳಿಸಿದ ಸಮಾಜವಾದಿ ಪಕ್ಷದ ಕಾರ್ಯಕರ್ತರು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular