ನವದೆಹಲಿ : ಕೇದಾರನಾಥ
ದರ್ಶನಕ್ಕೆ ತೆರಳಿದ್ದ ಕರ್ನಾಟಕದ 40 ಮಹಿಳೆಯರು ರಾಜ್ಯಕ್ಕೆ ಮರಳಲು ಪರದಾಡುವಂತಾ ಪರಿಸ್ಥಿತಿ ಉಂಟಾಗಿದ್ದು, ಸಹಾಯಕ್ಕಾಗಿ ಮಹಿಳೆಯರು ಮನವಿ ಮಾಡಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಹದಿಂದ ಹಲವು ಪ್ರದೇಶಗಳು ಜಲಾವೃತ್ತವಾಗಿದ್ದು, ಕೇದರಾನಾಥ ದರ್ಶನಕ್ಕೆ ತೆರಳಿದ್ದ ಕರ್ನಾಟಕದ 40 ಮಹಿಳೆಯರು ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯಕ್ಕೆ ಮರಳಲು ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.
ಕೇದರಾನಾಥ ದರ್ಶನಕ್ಕೆ ಬೆಂಗಳೂರಿನಿಂದ 26 ಮಹಿಳೆಯರು, ಚಿತ್ರದುರ್ಗದಿಂದ ಮೂವರು, ಶಿವಮೊಗ್ಗದ 4 ಮಹಿಳೆಯರು, ಭದ್ರಾವತಿಯಿಂದ 7 ಮಹಿಳೆಯರು ತೆರಳಿದ್ದರು. ಆದರೆ ದರ್ಶನ ಮುಗಿಸಿಕೊಂಡು ವಾಪಾಸ್ ಬರುವಾಗ ಭೀಕರ ಪ್ರವಾಹದಿಂದ ರಸ್ತೆ ಸಂಪರ್ಕ ಕಡಿತವಾಗಿದ್ದು, ಸದ್ಯ ಮಹಿಳೆಯರು ಕೇದರಾನಾಥ ಸಮೀಪದ ಸೀತಾಪುರದಲ್ಲಿ ಉಳಿದುಕೊಂಡಿದ್ದು, ತಾಯ್ನಾಡಿಗೆ ಮರಳಲು ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.