HomeKarnatakaಜು. 27 ರಂದು ಸರ್ಕಾರದಿಂದ ವಿಶೇಷ ಸಾಂದರ್ಭಿಕ ರಜೆ ಮಂಜೂರು: ಮಳೆ ಇಲ್ಲದ ಜಿಲ್ಲೆಗಳ ಕಂದಾಯ...

ಜು. 27 ರಂದು ಸರ್ಕಾರದಿಂದ ವಿಶೇಷ ಸಾಂದರ್ಭಿಕ ರಜೆ ಮಂಜೂರು: ಮಳೆ ಇಲ್ಲದ ಜಿಲ್ಲೆಗಳ ಕಂದಾಯ ನೌಕರರಿಗೆ ಅನ್ವಯ

ಬೆಂಗಳೂರು: ಜು. 27 ರಂದು ನಡೆಯುವ ಕಂದಾಯ ದಿನಾಚರಣೆ ಮತ್ತು ಕಾರ್ಯಾಗಾರಕ್ಕೆ ಹಾಜರಾಗಲು ರಾಜ್ಯದ ಕಂದಾಯ ಇಲಾಖಾ ನೌಕರರಿಗೆ ವಿಶೇಷ ಸಾಂಧರ್ಬಿಕ ರಜೆ ಮಂಜೂರು ಮಾಡಲಾಗಿದೆ.

ರಾಜ್ಯಮಟ್ಟದಲ್ಲಿ ಎಲ್ಲಾ ಕಂದಾಯ ನೌಕರರನ್ನು ಒಟ್ಟುಗೂಡಿಸಿ ಜು. 27 ರಂದು ಬೆಂಗಳೂರಿನಲ್ಲಿ ಕಂದಾಯ ದಿನಾಚರಣೆ ಹಾಗೂ ರಾಜ್ಯ ಮಟ್ಟದ ನೌಕರರ ಕಾರ್ಯಗಾರ ಆಚರಿಸಲಾಗುವುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾರ್ಯಕ್ರಮದಲ್ಲಿ ನಾಲ್ಕು ವಿಭಾಗದ ಕಂದಾಯ ಇಲಾಖೆಯ ನೌಕರರು ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ಸದರಿ ಕಾರ್ಯಕ್ರಮಕ್ಕೆ ಹಾಜರಾಗಲು ಅತಿ ಮಳೆಯಾಗುತ್ತಿರುವ ಜಿಲ್ಲೆಗಳಾದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬಾಗಲಕೋಟೆ, ಕೊಪ್ಪಳ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಬೆಳಗಾವಿ ಮತ್ತು ಹಾವೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಂದಾಯ ಇಲಾಖೆಯ ಅಧಿಕಾರಿ / ನೌಕರರನ್ನು ಹೊರತುಪಡಿಸಿ ಬಾಕಿ ಉಳಿದ ಜಿಲ್ಲೆಗಳಲ್ಲಿನ ಅಧಿಕಾರಿ / ನೌಕರರಿಗೆ ಒಂದು ದಿನದ ವಿಶೇಷ ಸಾಂದರ್ಭಿಕ ರಜೆಯನ್ನು ಷರತ್ತಿಗೊಳಪಡಿಸಿ ಸರ್ಕಾರ ಮಂಜೂರು ಮಾಡಿದೆ.

ಕಂದಾಯ ಇಲಾಖೆಯು ಏರ್ಪಡಿಸಿರುವ ಕಂದಾಯ ದಿನಾಚರಣೆ ಮತ್ತು ರಾಜ್ಯ ಮಟ್ಟದ ನೌಕರರ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ವಿಶೇಷ ಸಾಂಧರ್ಭಿಕ ರಜೆಯನ್ನು ನೀಡುವಂತೆ ಕೋರಿ ಸದರಿ ಅಧಿಕಾರಿ ಮತ್ತು ನೌಕರರು ಅರ್ಜಿ ಸಲ್ಲಿಸಬೇಕು.

ಈ ಸಮಾರಂಭದಲ್ಲಿ, ಭಾಗವಹಿಸಿದ ಬಗ್ಗೆ ಅಧಿಕೃತ ಹಾಜರಿ ಪತ್ರವನ್ನು ಕಂದಾಯ ಇಲಾಖೆಯ ನೌಕರರ ಸಂಘದ ಅಧ್ಯಕ್ಷರು ಅಥವಾ ಪ್ರಧಾನ ಕಾರ್ಯದರ್ಶಿ ಅವರಿಂದ ಪಡೆದು ಒದಗಿಸಬೇಕು. ಈ ಅಧಾರದ ಮೇಲೆ, ವಿಶೇಷ ಸಾಂಧರ್ಭಿಕ ರಜೆಯನ್ನು ಮಂಜೂರು ಮಾಡಲು ಅಧಿಕಾರಿವುಳ್ಳ ಸಕ್ಷಮ ಪ್ರಾಧಿಕಾರಿಗಳು ಮಂಜೂರು ಮಾಡತಕ್ಕದು.

ಕಂದಾಯ ದಿನಾಚರಣೆಯಲ್ಲಿ ಭಾಗವಹಿಸುವ ಅಧಿಕಾರಿ / ನೌಕರರು ಸಾರಿಗೆ ಭತ್ಯೆ ಮತ್ತು ದಿನಭತ್ಯೆಗೆ ಅರ್ಹರಿರುವುದಿಲ್ಲ. ಸದರಿ ಆದೇಶದ ಪ್ರಕಾರ ನೀಡಲಾಗಿರುವ ವಿಶೇಷ ಸಾಂದರ್ಭಿಕ ರಜೆಯನ್ನು ಈ ಒಂದು ದಿನದ ಕಾರ್ಯಗಾರದಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ಮಾತ್ರ ಮಂಜೂರು ಮಾಡತಕ್ಕದ್ದು ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular