HomeEntertainmentಒಮ್ಮೆಲೆ 70 ಚಿತ್ರಗಳಿಗೆ ಸಹಿ ಹಾಕಿದ್ದರಂತೆ ಈ ಸೂಪರ್‌ಸ್ಟಾರ್....!

ಒಮ್ಮೆಲೆ 70 ಚಿತ್ರಗಳಿಗೆ ಸಹಿ ಹಾಕಿದ್ದರಂತೆ ಈ ಸೂಪರ್‌ಸ್ಟಾರ್….!

ಈ ಸೂಪರ್‌ಸ್ಟಾರ್ ಒಮ್ಮೆಲೆ 70 ಚಿತ್ರಗಳಿಗೆ ಸಹಿ ಹಾಕಿದ್ದರಂತೆ. ಆ ಸೂಪರ್ ಸ್ಟಾರ್ ಯಾರಿರಬಹುದು ? ರಜನಿಕಾಂತ್, ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್, ಶಾರುಖ್ ಖಾನ್ ಇವರ್ಯಾರು ಅಲ್ಲ. ಹಾಗಿದ್ರೆ ಇನ್ಯಾರು ಅಂದ್ರೆ ಅವರೇ ಬಾಲಿವುಡ್ ನಟ ಗೋವಿಂದ.

ಹೌದು, ನಟ ಗೋವಿಂದ ಒಂದು ಕಾಲದಲ್ಲಿ ಬಾಲಿವುಡ್‌ನ ಅಗ್ರ ನಟರಲ್ಲಿ ಒಬ್ಬರಾಗಿದ್ದರು. ತಮ್ಮ ವೃತ್ತಿಜೀವನದಲ್ಲಿ ಅನೇಕ ಸೂಪರ್‌ ಹಿಟ್ ಚಲನಚಿತ್ರಗಳನ್ನು ನೀಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಗೋವಿಂದ ಬೆಳ್ಳಿತೆರೆಯಿಂದ ನಾಪತ್ತೆಯಾಗಿದ್ದರೂ, ಅವರು ಬಾಲಿವುಡ್‌ನಲ್ಲಿ ಮಿಂಚಿದ್ದ ಕಾಲವೊಂದಿತ್ತು.

ಅಮಿತಾಭ್ ಬಚ್ಚನ್, ಸಲ್ಮಾನ್ ಖಾನ್, ಶಾರುಖ್ ಖಾನ್, ಅಮೀರ್ ಖಾನ್ ಮತ್ತು ಅಕ್ಷಯ್ ಕುಮಾರ್ ಅವರಂತಹ ಮೆಗಾಸ್ಟಾರ್‌ಗಳು ಸಹ ಇಲ್ಲಿಯವರೆಗೆ ಮುರಿಯಲು ಸಾಧ್ಯವಾಗದ ದಾಖಲೆಯನ್ನು 37 ವರ್ಷಗಳ ಹಿಂದೆಯೇ ಗೋವಿಂದ ಅವರು ಮಾಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1986 ರಲ್ಲಿ ʼಲವ್ 86ʼ ಚಿತ್ರದ ಮೂಲಕ ಗೋವಿಂದ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ರು. ಇದು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಹಿಟ್ ಆಗಿತ್ತು. ಅವರ ಚೊಚ್ಚಲ ಚಿತ್ರದ ಯಶಸ್ಸಿನ ನಂತರ, ಗೋವಿಂದ ಕೆಲವೇ ವಾರಗಳ ಅವಧಿಯಲ್ಲಿ 70 ಕ್ಕೂ ಹೆಚ್ಚು ಚಿತ್ರಗಳಿಗೆ ಸಹಿ ಹಾಕಿದರಂತೆ.

ಗೋವಿಂದ ಅವರು 1987ರಲ್ಲಿ ಸಂದರ್ಶನವೊಂದರಲ್ಲಿ ಈ ಹೇಳಿಕೆಯನ್ನು ನೀಡಿದ್ದರು. ನಾನು 70 ಚಿತ್ರಗಳಿಗೆ ಸಹಿ ಹಾಕಿದ್ದೆ. ಅದರಲ್ಲಿ 8 ರಿಂದ 10 ಚಿತ್ರಗಳು ಮುಚ್ಚಲ್ಪಟ್ಟವು. ದಿನಾಂಕ ಮತ್ತು ವೇಳಾಪಟ್ಟಿಯ ಸಮಸ್ಯೆಗಳಿಂದ ನಾನು 4 ರಿಂದ 5 ಚಿತ್ರಗಳನ್ನು ಕೈಬಿಟ್ಟಿದ್ದೆ ಎಂದು ಗೋವಿಂದ ಹೇಳಿದ್ದರು.

ಗೋವಿಂದ ಅವರು ಕೆಲವೊಮ್ಮೆ ದಿನಕ್ಕೆ ಎರಡು ಸಿನಿಮಾಗಳ ಚಿತ್ರೀಕರಣಗಳಲ್ಲಿ ಪಾಲ್ಗೊಳ್ಳುತ್ತಾರೆ. ಕೆಲವೊಮ್ಮೆ ದಿನಕ್ಕೆ ನಾಲ್ಕರಿಂದ ಐದು ಚಿತ್ರಗಳನ್ನು ಶೂಟ್ ಮಾಡಿದ್ದಾಗಿ ಹೇಳಿದ್ದರು. ಗೋವಿಂದ ಅವರು ಎಲ್ಲಾ ಚಿತ್ರಗಳ ಸ್ಕ್ರಿಪ್ಟ್ ಅನ್ನು ನೆನಪಿಟ್ಟುಕೊಳ್ಳುವುದರಿಂದ ತಮ್ಮ ಚಿತ್ರಗಳ ಪಾತ್ರಕ್ಕೆ ಸುಲಭವಾಗಿ ತಲ್ಲಿನರಾಗಿರುವುದಾಗಿ ಹೇಳಿದ್ದಾರೆ.

ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ, ತಾಲ್, ಚಾಂದಿನಿ, ದೇವದಾಸ್ ಮತ್ತು ಗದರ್ ನಂತಹ ಅನೇಕ ದೊಡ್ಡ ಚಿತ್ರಗಳನ್ನು ತಿರಸ್ಕರಿಸಿದ್ದರು ಎಂದು ಒಮ್ಮೆ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಗೋವಿಂದ ಕೊನೆಯದಾಗಿ 2019 ರಲ್ಲಿ ಬಿಡುಗಡೆಯಾದ ರಂಗೀಲಾ ರಾಜ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

For Latest News Updates, Join Our Whatsapp Community🚩
RELATED ARTICLES

Most Popular