HomeCrimeಚಲಿಸುವ ರೈಲಿನಲ್ಲಿ ಬಾಗಿಲ ಬಳಿ ನಿಂತು ಮೊಬೈಲ್‌ ನಲ್ಲಿ ಮಾತನಾಡುವವರು ಓದಲೇಬೇಕು ಈ ಸುದ್ದಿ...!

ಚಲಿಸುವ ರೈಲಿನಲ್ಲಿ ಬಾಗಿಲ ಬಳಿ ನಿಂತು ಮೊಬೈಲ್‌ ನಲ್ಲಿ ಮಾತನಾಡುವವರು ಓದಲೇಬೇಕು ಈ ಸುದ್ದಿ…!

ಚಲಿಸೋ ರೈಲಿನಲ್ಲಿ ಕಳ್ಳತನದ ಪ್ರಕರಣ ಸಾಮಾನ್ಯ. ಇದಕ್ಕೆ ಪೊಲೀಸರು ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಂಡರೂ ಕಳ್ಳತನದ ಪ್ರಕರಣಗಳಿಗೆ ಮಾತ್ರ ಬ್ರೇಕ್ ಬೀಳುತ್ತಿಲ್ಲ. ಈಗ ಚಲಿಸುತ್ತಿದ್ದ ರೈಲಿನಲ್ಲಿ ಕಳ್ಳತನಕ್ಕೆ ಕಳ್ಳರು ಮುಂದಾಗಿರುವಾಗಲೇ ಯುವತಿಯೊಬ್ಬಳು ದಾರುಣವಾಗಿ ಸಾವನ್ನಪ್ಪಿದ್ದಾಳೆ.

ಅಸಲಿಗೆ ಕಳ್ಳರಿಬ್ಬರು ರೈಲಿನಲ್ಲಿ ಪ್ರಯಾಣ ಮಾಡುತ್ತಿರೋ ಪ್ರಯಾಣಿಕರ ಮೊಬೈಲ್ ಕಳ್ಳತನ ಮಾಡುವುದನ್ನೇ ದಂಧೆ ಮಾಡಿಕೊಂಡಿದ್ದರು. ಅದೇ ರೀತಿ ಈ ಬಾರಿಯೂ ಮತ್ತೆ ಪ್ರಯಾಣಿಕರ ಮೊಬೈಲ್ ಕದಿಯಲು ಈ ಕಳ್ಳರು ಹೊಂಚು ಹಾಕಿ ಕುತಿದ್ದರು.

ಅದೇ ಸಮಯದಲ್ಲಿ 22 ವರ್ಷದ ಪ್ರೀತಿ ರೈಲಿನ ಬಾಗಿಲಲ್ಲಿ ಮೊಬೈಲ್​​ನಲ್ಲಿ ನಿಂತು ಮಾತನಾಡುತ್ತ ನಿಂತಿದ್ದಳು. ಆಕೆಯ ಮೊಬೈಲ್ ಕಸಿಯಲೆಂದು ಈ ಕಳ್ಳರು ಎರಗಿ ಬಿದ್ದಿದ್ದಾರೆ. ಪ್ರೀತಿ ತಮ್ಮ ಮೊಬೈಲ್ ಅವರ ಕೈಗೆ ಸಿಗದಂತೆ ತಡೆಹಿಡಿದಿದ್ದಾರೆ. ಆದರೂ ಕಳ್ಳರು ಮೊಬೈಲ್ ಕಸಿಯುವುದಕ್ಕೆ ನೋಡಿದ್ದಾರೆ. ಆಗ ರೈಲು ಚಲಿಸುತ್ತಿದ್ದರಿಂದ ಆಕೆ ಆಯತಪ್ಪಿ ಬಿದ್ದಿದ್ದಾಳೆ. ಆಗ ಅವರಿಗೆ ಗಾಯಗಳಾಗಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗಂಭೀರವಾಗಿ ಗಾಯಗೊಂಡಿದ್ದ ಪ್ರೀತಿಯನ್ನ ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಈ ಘಟನೆ ಚೆನ್ನೈಯನ ಇಂದಿರಾನಗರ ನಿಲ್ದಾಣದಿಂದ ಕೊಂಚ ದೂರದಲ್ಲಿ ನಡೆದಿದೆ. ತಕ್ಷಣವೇ ಕ್ರಮ ಕೈಗೊಂಡಿರೋ ಸ್ಥಳೀಯ ಪೊಲೀಸರು ಈ ದರೋಡೆಕೋರರ ಬಳಿ ಇದ್ದ ಕದ್ದ ಮೊಬೈಲ್ ಸಹಾಯದಿಂದ ಇವರನ್ನ ಹುಡುಕಿ ಬಂಧಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular