HomeKarnatakaBIG NEWS: ಒಂದೇ ಹುದ್ದೆಗೆ ನಾಲ್ವರ ಹೆಸರು ವರ್ಗಾವಣೆಗೆ ಶಿಫಾರಸು

BIG NEWS: ಒಂದೇ ಹುದ್ದೆಗೆ ನಾಲ್ವರ ಹೆಸರು ವರ್ಗಾವಣೆಗೆ ಶಿಫಾರಸು

ಬೆಂಗಳೂರು: ಒಂದೇ ಹುದ್ದೆಗೆ ನಾಲ್ವರ ಹೆಸರನ್ನು ಶಿಫಾರಸು ಮಾಡಿ ಸಿಎಂ ಆದೆಶ ಹೊರಡಿಸಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಲೆಕ್ಕಾಧಿಕಾರಿ ಹುದ್ದೆಗೆ ನಾಲ್ವರ ಹೆಸರನ್ನು ಶಿಫಾರಸು ಮಾಡಲಾಗಿದೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಸ್ತುತ ರಾಜ್ಯ ಹೆದ್ದಾರಿ ಅಭಿವೃದ್ದಿ ಯೋಜನೆ ಲೆಕ್ಕಾಧಿಕಾರಿ ಹುದ್ದೆಯಲ್ಲಿ ಎಂ. ಮಂಜುನಾಥ್ ಕಾರ್ಯ ನಿರ್ವಹಿಸುತ್ತಿದ್ದು, ಇದೀಗ ಈ ಹುದ್ದೆಗೆ ಎಸ್.ಕೆ. ಜಗದೀಶ್, ಕೆ.ಹೆಚ್. ಶ್ರೀನಿವಾಸ್, ಎಂ. ನಾಗರಾಜು ಹಾಗೂ ಎಂ.ಎಸ್. ಪ್ರತಿಭಾ ಅವರ ಹೆಸರನ್ನು ಶಿಫಾರಸು ಮಾಡಿ ಆದೇಶ ಹೊರಡಿಸಲಾಗಿದೆ. ಇದು ಸಿಎಂ ಕಚೇರಿಯಲ್ಲಿಯೇ ವರ್ಗಾವಣೆ ದಂಧೆಗೆ ಕುಮ್ಮಕು ನೀಡಲಾಗಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಇನ್ನಷ್ಟು ಆಹಾರವಾಗುವಂತೆ ಮಾಡಿದೆ.

For Latest News Updates, Join Our Whatsapp Community🚩
RELATED ARTICLES

Most Popular