HomeEntertainmentಇಂದು ಬಿಡುಗಡೆಯಾಗಿದೆ 'ಲವ್' ಚಿತ್ರದ ಮೊದಲ ಹಾಡು

ಇಂದು ಬಿಡುಗಡೆಯಾಗಿದೆ ‘ಲವ್’ ಚಿತ್ರದ ಮೊದಲ ಹಾಡು

ಮಹೇಶ್ ಸಿ ನಿರ್ದೇಶನದ ಪ್ರಜಯ್ ಜಯರಾಮ್ ಅಭಿನಯದ ಬಹುನಿರೀಕ್ಷಿತ ‘ಲವ್’ ಚಿತ್ರದ ಮೊದಲ ಹಾಡು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ, ಮಧ್ಯಾಹ್ನ 12:34ಕ್ಕೆ ಈ ಲಿರಿಕಲ್ ಸಾಂಗ್ ಅನ್ನು ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.

ಕಣ್ಮಣಿ ಎಂಬ ಈ ಹಾಡಿಗೆ ರೋಷಿತ್ ವಿಜಯನ್ ಸಂಗೀತ ಸಂಯೋಜನೆ ನೀಡುವುದರ ಜೊತೆಗೆ ಧ್ವನಿಗೂಡಿಸಿದ್ದು ನಿರ್ದೇಶಕ ಮಹೇಶ್ ಅಮ್ಮಲಿದೊಡ್ಡಿಮನಿ ಸಾಹಿತ್ಯ ಬರೆದಿದ್ದಾರೆ. ರೋಮ್ಯಾಂಟಿಕ್ ಲವ್ ಸ್ಟೋರಿ ಕಥಾಹಂದರ ಹೊಂದಿರುವ ಈ ಸಿನಿಮಾವನ್ನು ಶ್ರೀ ಕಾಳಬೈರೇಶ್ವರ ಮೂವಿ ಮೇಕರ್ಸ್ ಬ್ಯಾನರ್ ನಡಿ ದಿವಾಕರ್  ನಿರ್ಮಾಣ ಮಾಡಿದ್ದು, ವೃಷ ನಾಯಕಿಯಾಗಿ ಅಭಿನಯಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular