HomeKarnatakaBIG NEWS: ಠಾಣೆಯಲ್ಲಿಯೇ ಆರೋಪಿ ಆತ್ಮಹತ್ಯೆ; ಪಿಐ, ಪಿಎಸ್ಐ ಸೇರಿ ಐವರು ಸಸ್ಪೆಂಡ್

BIG NEWS: ಠಾಣೆಯಲ್ಲಿಯೇ ಆರೋಪಿ ಆತ್ಮಹತ್ಯೆ; ಪಿಐ, ಪಿಎಸ್ಐ ಸೇರಿ ಐವರು ಸಸ್ಪೆಂಡ್


ಹೊನ್ನಾವರ: ಠಾಣೆಯಲ್ಲಿಯೇ ಆರೋಪಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಐ, ಪಿಎಸ್ಐ ಸೇರಿದಂತೆ ಐವರು ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದಿದೆ.

ಪಾಲಿಶ್ ಮಾಡುವ ನೆಪದಲ್ಲಿ ಚಿನ್ನ ಕಳ್ಳತನ ಮಾಡುತ್ತಿದ್ದ ಆರೋಪದ ಮೇಲೆ ನಿನ್ನೆ ಇಬ್ಬರು ಆರೋಪಿಗಳನ್ನು ಹೊನ್ನಾವರ ಠಾಣೆ ಪೊಲೀಸರು ಬಂಧಿಸಿದ್ದರು. ಅವರಲ್ಲಿ ಓರ್ವ ಆರೋಪಿ ಠಾಣೆಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ.

ಈ ಹಿನ್ನೆಲೆಯಲ್ಲಿ ಹೊನ್ನಾವರ ಠಾಣೆಯ ಪಿಐ ಮಂಜುನಾಥ್, ಪಿಎಸ್ಐ ಮಂಜೇಶ್ವರ್ ಚಂದಾವರ್, ಕಾನ್ಸ್ ಟೇಬಲ್ ಗಳಾದ ಮಹಾವೀರ್, ರಮೇಶ್, ಸಂತೋಷ್ ಅವರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular