HomeKarnatakaಫಾರೆಸ್ಟ್ ವಾಚರ್ ಮನೆಯಲ್ಲಿಯೇ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ಮೌಲ್ಯದ ಮರದ ದಿಮ್ಮಿ ಪತ್ತೆ

ಫಾರೆಸ್ಟ್ ವಾಚರ್ ಮನೆಯಲ್ಲಿಯೇ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ಮೌಲ್ಯದ ಮರದ ದಿಮ್ಮಿ ಪತ್ತೆ

ಶಿವಮೊಗ್ಗ: ಬೇಲಿಯೇ ಎದ್ದು ಹೊಲ ಮೇಯ್ದ ಕಥೆ ಇದು. ಅರಣ್ಯ ಸಂರಕ್ಷರೇ ಅರಣ್ಯವನ್ನು ದೋಚುವ ಕೆಲಸ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.

ಫಾರೆಸ್ಟ್ ವಾಚರ್ ಓರ್ವರ ಮನೆಯಲ್ಲಿಯೇ ನೂರಾರು ಅಕ್ರಮ ಮರದ ದಿಮ್ಮಿಗಳು ಪತ್ತೆಯಾಗಿವೆ. ತೀರ್ಥಹಳ್ಳಿ ತಾಲೂಕಿನ ಮುಂಡುವಳ್ಳಿ ಗ್ರಾಮದ ಶಾಂತಿಕೆರೆಯ ಮೃಗವಧೆ ಮೀಸಲು ಅರಣ್ಯದ ಸರ್ವೇ ನಂ. 188ರಲ್ಲಿ ಅಕ್ರಮ ನಾಟ ಅಥವಾ ಮರದ ದಿಮ್ಮಿ ದಂಧೆ ನಡೆಸುತ್ತಿರುವುದು ಬಟಾಬಯಲಾಗಿದೆ.

ಫಾರೆಸ್ಟ್ ವಾಚರ್ ಫಿಲಿಪ್ ಡಿಸೋಜಾ ತೋಟದ ಮನೆಯಲ್ಲಿ ಅಕ್ರಮ ಮರದ ದಿಮ್ಮಿಗಳು ಪತ್ತೆಯಾಗಿದ್ದು, ಹೊನ್ನೆ, ಮತ್ತಿ, ಬೋಗಿ ಸೇರಿದಂತೆ ವಿವಿಧ ಜಾತಿಯ ಮರಗಳ ದಿಮ್ಮಿ ಸಿಕ್ಕಿವೆ. ಫಾರೆಸ್ಟ್ ವಾಚರ್ ಗೆ ಇತರ ಅಧಿಕಾರಿಗಳ ಬೆಂಬಲವೂ ಇದೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಡಿನ ಮರಗಳನ್ನು ಕಡಿದು ನಾಟಗಳನ್ನು ಸಿದ್ಧಪಡಿಸಿದ್ದ ವಾಚರ್​​ಗೆ ಡಿಆರ್​​ಎಫ್​​ಒ ಹರೀಶ್ ನಾಯ್ಕ್ ಕೂಡ ಸಾಥ್​​ ನೀಡಿದ್ದಾರೆ ಎನ್ನಲಾಗಿದ್ದು, ಫಿಲಿಪ್ ಎಂಪಿಎಂನ ನಡುತೋಪಿನ ಅರಣ್ಯವಲಯದಲ್ಲಿ ವಾಚರ್ ಆಗಿದ್ದಾರೆ. ಎಂಪಿಎಂಗೆ ಸೇರಿದ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ 10 ಎಕೆರೆಗೂ ಅಧಿಕ ಭೂಮಿಯಲ್ಲಿ ತೋಟವನ್ನು ಮಾಡಲಾಗಿದ್ದು, ಅಕ್ರಮ ನಾಟ ಸಂಗ್ರಹಿಸಿರುವ ಕುರಿತು ಶಿವಮೊಗ್ಗ ಡಿಎಫ್ ಒಗೆ ದೂರು ನೀಡಲಾಗಿತ್ತು.

ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಸಂಚಾರಿ ಅರಣ್ಯಾಧಿಕಾರಿಗಳ ವಿಭಾಗ, ವಾಚರ್ ಮನೆಯಲ್ಲಿರುವ ಅಕ್ರಮ ನಾಟ ಸೀಜ್ ಮಾಡಿದೆ. ವಾಚರ್​​ಗೆ ಸಾಥ್ ನೀಡಿರುಡಿರುವ ಆರ್​​ಎಫ್​​ಒ ಹರೀಶ್ ನಾಯ್ಕ್ ವಿರುದ್ಧವೂ ಕ್ರಮಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಅಂಶ ಬಜೆಟ್ ಪುಸ್ತಕದಿಂದಲೇ ಮಾಯ: ಬಿ.ಆರ್.ಪಾಟೀಲ್ ಗಂಭೀರ ಆರೋಪ

ಬೆಂಗಳೂರು: ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಕುರಿತ ಅಂಶವನ್ನು ಸಿದ್ದರಾಮಯ್ಯ ಅವರ ಬಜೆಟ್ ಪುಸ್ತಕದಿಂದಲೇ ಮಾಯವಾಗಿದೆ ಎಂದು ಬಿ.ಆರ್‌.ಪಾಟೀಲ್ ತಮ್ಮದೇ ಸರ್ಕಾಅರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಲ್ಲಿ ಮಾತನಾಡಿದ ಬಿ.ಆರ್.ಪಾಟೀಲ್., ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಬಗ್ಗೆ ಹಿಂದೆ ಸಿದ್ದರಾಮಯ್ಯ ಗಮನಕ್ಕೆ ತಂದಿದ್ದೆ. ಕಳೆದ ಬಜೆಟ್‌ನಲ್ಲಿ ಪ್ರಕಟ ಮಾಡಲು ಸಿದ್ದರಾಮಯ್ಯ ನಿರ್ಧರಿಸಿದ್ದರು. ಬಜೆಟ್ ಪ್ರೂಫ್ ರೀಡಿಂಗ್​ನಲ್ಲೂ ಕಾಯ್ದೆಗೆ ಬದಲಾವಣೆ ತರುತ್ತೇವೆ ಎಂದು ಇತ್ತು. ಕೊನೇ ಘಳಿಗೆಯಲ್ಲಿ ಬಜೆಟ್ ಕಾಪಿಯಲ್ಲೇ ಆ ವಿಚಾರ ಹೈಡ್ ಮಾಡಲಾಯ್ತು. ಯಾವ ಮಾಯಾಜಾಲದಿಂದ ಬಜೆಟ್ ಅಂಶವನ್ನೇ ಮಾಯ ಮಾಡಿದ್ರು ಎಂಬುದು ಗೊತ್ತಿಲ್ಲ ಎಂದು ಕಿಡಿಕಾರಿದರು.

ಇಂದು ರಣದೀಪ್ ಸಿಂಗ್ ಸುರ್ಜೇವಾಲ ಕರೆದು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆ ವಾಪಸ್ ಪಡೆಯಿರಿ ಅಂದ್ರು. ನಾನು ಈ ವಿಚಾರ ಪ್ರಸ್ತಾಪಿಸಿ ಯಾಕೆ ಭರವಸೆ ಕೊಟ್ರಿ ಅಂದೆ. ಮೊದಲು ಪ್ರಣಾಳಿಕೆಯಲ್ಲಿ ಭರವಸೆ ಈಡೇರಿಸಿ ಅಂತ ಹೇಳಿದ್ದೇನೆ. ಈ ಸಂಬಂಧ ನಾನು ರಾಹುಲ್‌ ಗಾಂಧಿಗೂ ಪತ್ರ ಬರೆಯುತ್ತೇನೆ. ನಮಗೂ ಬಿಜೆಪಿಗೂ ವ್ಯತ್ಯಾಸ ಏನು? ಬಿಜೆಪಿಯವರು ರಿಯಲ್ ಎಸ್ಟೇಟ್​ಗಾಗಿ ಮಾಡಿದ್ರು. ನಮ್ಮ ಸರ್ಕಾರಕ್ಕೂ ಬಿಜೆಪಿಗೂ ಏನು ವ್ಯತ್ಯಾಸವಿದೆ? ಎಂದು ಪ್ರಶ್ನಿಸಿದರು.

ಕಳೆದ ಬಿಜೆಪಿ ಸರ್ಕಾರ ಭೂ ಸುಧಾರಣಾ ಕಾಯ್ದೆಗೆ ಅರ್ಥವಿಲ್ಲದಂತೆ ಮಾಡಿತು. ದೇವರಾಜು ಅರಸು ಈ ಕಾಯ್ದೆ ತಂದು ಕ್ರಾಂತಿ‌ ಮೂಡಿಸಿದ್ದರು. ಭೂಸುಧಾರಣಾ ಕಾಯ್ದೆಯನ್ನು ಮೂಲ ಸ್ವರೂಪದಲ್ಲೇ ಜಾರಿಗೆ ತರುತ್ತೇವೆ ಅಂತ ನಾವು ಚುನಾವಣಾ ಪ್ರಣಾಳಿಕೆಯಲ್ಲಿ ಮಾತು ಕೊಟ್ಟಿದ್ದೇವೆ. ಸರ್ಕಾರ ಬಂದು ಮೂರೂವರೆ ವರ್ಷ ಕಳೆದರೂ ಕಾಯ್ದೆಗೆ ತಿದ್ದುಪಡಿ ತಂದಿಲ್ಲ. ನಾನು ಸದನದಲ್ಲಿ ಪ್ರಶ್ನೆ ಕೇಳಿದರೂ ತಿದ್ದುಪಡಿ ಪ್ರಸ್ತಾವನೆ ಮುಂದಿಲ್ಲ ಅಂತ ಉತ್ತರ ಕೊಟ್ಟಿದ್ದಾರೆ. ಹಾಗಾದ್ರೆ ಯಾಕೆ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ಕೊಟ್ರಿ? ಈಗ ಹೀಗೆ ಮಾಡಿದರೆ ಬಿಜೆಪಿಯವರು ಮಾಡಿದ ತಿದ್ದುಪಡಿಗೆ ಬೆಂಬಲ ಕೊಟ್ಟಂತೆ ಅಲ್ವೇ ಎಂದು ಕೇಳಿದರು.

2020ರಲ್ಲಿ ಯಡಿಯೂರಪ್ಪ ಸರ್ಕಾರದಲ್ಲಿ ಕರ್ನಾಟಕ ಭೂ ಸುಧಾರಣೆ (ತಿದ್ದುಪಡಿ) ಕಾಯ್ದೆ ಜಾರಿಗೆ ತಂದಿತ್ತು. ಈ ಕಾಯ್ದೆ ಮೂಲಕ ರಾಜ್ಯದಲ್ಲಿ ಕೃಷಿ ಭೂಮಿ ಖರೀದಿ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲಾಗಿತ್ತು. ಮೂಲ ಕಾಯ್ದೆಯಲ್ಲಿದ್ದ 79A ಸೆಕ್ಷನ್ ರದ್ದು ಪಡಿಸಲಾಗಿತ್ತು. ಈ ಮುಂಚೆ ಕೃಷಿಯೇತರ ಮೂಲಗಳಿಂದ ವಾರ್ಷಿಕ 25 ಲಕ್ಷ ರೂ‌. ಕಡಿಮೆ ಆದಾಯ ಇದ್ದವರು ಮಾತ್ರ ಕೃಷಿ ಭೂಮಿಯನ್ನು ಖರೀದಿ ಮಾಡಬಹುದಿತ್ತು. ಆ ಮಿತಿಯನ್ನು ತಿದ್ದುಪಡಿ ಕಾಯ್ದೆಯಲ್ಲಿ ತೆಗೆದುಹಾಕಲಾಗಿತ್ತು. ಕೃಷಿಕರಲ್ಲದವರು, ಉದ್ಯಮಿಗಳು, ಕೃಷಿ ಹಿನ್ನೆಲೆ ಇಲ್ಲದ ಯಾವುದೇ ವ್ಯಕ್ತಿ ಕೃಷಿ ಭೂಮಿಯನ್ನು ಖರೀದಿ ಮಾಡಲು ಅನುವು ಮಾಡಲಾಗಿದೆ.

ಈ ತಿದ್ದುಪಡಿ ಕಾಯ್ದೆಗೆ ರಾಜ್ಯದ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದು ರೈತ ವಿರೋಧಿ ಕಾಯ್ದೆ ಎಂದು ಆರೋಪಿಸಿತ್ತು. ಆ ತಿದ್ದುಪಡಿ ಕಾಯ್ದೆಯನ್ನು ರದ್ದು ಮಾಡಿ ಹಿಂದಿನ ಮೂಲ ಕಾಯ್ದೆಯನ್ನೇ ಮರುಸ್ಥಾಪಿಸಬೇಕು ಎಂದು ರೈತರು ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಆಗ್ರಹಿಸಿದ್ದರು. ಇತ್ತ ಪ್ರಣಾಳಿಕೆಯಲ್ಲೂ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಭೂ ಸುಧಾರಣ ತಿದ್ದುಪಡಿ ಕಾಯ್ದೆಯನ್ನು ರದ್ದು ಪಡಿಸುವುದಾಗಿ ಭರವಸೆ ನೀಡಿತ್ತು. ಆದರೆ, ಈ ವರೆಗೂ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ತೀರ್ಮಾನ ಕೈಗೊಂಡಿಲ್ಲ ಎಂಬುದು ಬಿ.ಆರ್.ಪಾಟೀಲ್ ವಾದ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular