HomeEntertainmentಭರ್ಜರಿ ಓಪನಿಂಗ್: ಮೊದಲ ದಿನದ ಗಳಿಕೆಯಲ್ಲಿ ದಾಖಲೆ ಬರೆದ 'ಆದಿಪುರುಷ್' 140 ಕೋಟಿ ರೂ. ಕಲೆಕ್ಷನ್

ಭರ್ಜರಿ ಓಪನಿಂಗ್: ಮೊದಲ ದಿನದ ಗಳಿಕೆಯಲ್ಲಿ ದಾಖಲೆ ಬರೆದ ‘ಆದಿಪುರುಷ್’ 140 ಕೋಟಿ ರೂ. ಕಲೆಕ್ಷನ್

ವರ್ಷದ ಅತಿದೊಡ್ಡ ಓಪನಿಂಗ್ ದಾಖಲಿಸಿದ ಪ್ರಭಾಸ್ ಅಭಿನಯದ ಬಿಗ್ ಬಜೆಟ್ ಚಿತ್ರ ‘ಆದಿಪುರುಷ್’ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ದಾಖಲೆ ಬರೆದು ಮೊದಲ ದಿನ ವಿಶ್ವದಾದ್ಯಂತ 140 ಕೋಟಿ ರೂ. ಗಳಿಸಿದೆ.

ಪ್ರಭಾಸ್, ಸೈಫ್ ಅಲಿ ಖಾನ್ ಮತ್ತು ಕೃತಿ ಸನೋನ್ ಅಭಿನಯದ ‘ಆದಿಪುರುಷ್’ ಚಿತ್ರ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದಿರಬಹುದು. ಆದರೆ ಆರಂಭಿಕ ದಿನದ ಗಳಿಕೆಯಲ್ಲಿ ಗಲ್ಲಾಪೆಟ್ಟಿಗೆ ಲೂಟಿ ಮಾಡಿದೆ,

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿತ್ರದ ನಿರ್ಮಾಪಕರು, ಟಿ-ಸಿರೀಸ್, ಚಿತ್ರವು ತನ್ನ ಮೊದಲ ದಿನದಂದು ವಿಶ್ವಾದ್ಯಂತ 140 ಕೋಟಿ ರೂಪಾಯಿ ಗಳಿಸಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಶುಕ್ರವಾರ ಬಿಡುಗಡೆಯಾಗಿರುವ ರಾಮಾಯಣ ಕಥೆ ಆದರಿಸಿದ ‘ಅದಿಪುರುಷ್’ ಮೊದಲ ದಿನ ವಿಶ್ವದಾದ್ಯಂತ 140 ಕೋಟಿ ರೂಪಾಯಿ ಗಳಿಸಿದೆ. ಸುಮಾರು 600 ಕೋಟಿ ರೂ ವೆಚ್ಚದಲ್ಲಿ ಚಿತ್ರ ನಿರ್ಮಾಣ ಮಾಡಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular