HomeKarnatakaBIG NEWS: ಲೋಕಸಭಾ ಚುನಾವಣೆಗೆ ವಿ.ಸೋಮಣ್ಣಗೆ ನನ್ನ ಸೀಟ್ ಕೊಡ್ತಾರೆ ಎಂದ ಹಾಲಿ ಸಂಸದ; ಆಡಿಯೋ...

BIG NEWS: ಲೋಕಸಭಾ ಚುನಾವಣೆಗೆ ವಿ.ಸೋಮಣ್ಣಗೆ ನನ್ನ ಸೀಟ್ ಕೊಡ್ತಾರೆ ಎಂದ ಹಾಲಿ ಸಂಸದ; ಆಡಿಯೋ ವೈರಲ್

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗಾಗಿ ಬಿಜೆಪಿ ತೆರೆಮರೆಯಲ್ಲಿ ಭಾರಿ ಸಿದ್ಧತೆ ಆರಂಭಿಸಿದೆ. ಈ ನಡುವೆ ತುಮಕೂರು ಹಾಲಿ ಸಂಸದ ಜಿ.ಎಸ್. ಬಸವರಾಜ್ ಕ್ಷೇತ್ರ ತ್ಯಾಗದ ಬಗ್ಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ.

ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಚಿವ ವಿ. ಸೋಮಣ್ಣ ತುಮಕೂರಿನಿಂದ ಸ್ಪರ್ಧಿಸಲಿದ್ದಾರೆ. ಸೋಮಣ್ಣಗೆ ನನ್ನ ಸೀಟ್ ನ್ನು ಕೊಡುತ್ತಿದ್ದಾರೆ ಎಂದು ಸಂಸದ ಜಿ.ಎಸ್. ಬಸವರಾಜ್ ಹೇಳಿರುವ ಆಡಿಯೋ ಬಹಿರಂಗವಾಗಿದ್ದು, ಅಚ್ಚರಿಗೆ ಕಾರಣವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಮುದಾಯ ಒಗ್ಗಟ್ಟಾಗಿದ್ದರೆ ಏನು ಬೇಕಾದ್ರೂ ಮಾಡಬಹುದು. ನನ್ನ ಸೀಟ್ ನ್ನು ಮಾಜಿ ಸಚಿವ ವಿ. ಸೋಮಣ್ಣಗೆ ಕೊಡ್ತಾರೆ. ನಾನು ಚುನಾವಣೆಗೆ ಸ್ಪರ್ದಿಸಲ್ಲ ಎಂದು ಈಗಾಗಲೇ ಹೇಳಿದ್ದೇನೆ ಎಂದಿರುವ ಜಿ.ಎಸ್. ಬಸವರಾಜು ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ. ಇದು ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular