
ಬೆಂಗಳೂರು ನಗರದಲ್ಲಿ ಸದ್ಯದಲ್ಲೇ ನೀರಿನ ದರ ಏರಿಕೆ ಆಗಬಹುದು ಎಂದು ಡಿಸಿಎಂ ಡಿಕೆಶಿ ಸುಳಿವು ನೀಡಿದ್ದಾರೆ. ಜಲಮಂಡಳಿಯ ( Water Board) ಆದಾಯ ಬಹಳ ಕಡಿಮೆ ಇದೆ. ಬೆಂಗಳೂರಿನ ಜನರಿಗೆ ಬಹಳ ಸ್ವಚ್ಚವಾದ ನೀರು ಪೂರೈಸಬೇಕು. ಎಲ್ಲೆಲ್ಲಿ ಸ್ವಚ್ಚ ನೀರು ಬಿಡಲು ಸಾಧ್ಯವಾಗುತ್ತಿಲ್ಲ, ಅಲ್ಲಿ ನೀರಿನ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದರು.
‘ BWSSB’ ಸ್ಥಿತಿ ಬಹಳ ಚಿಂತಾಜನಕವಾಗಿದೆ. 2014 ರಿಂದ ಇಲ್ಲಿವರೆಗೆ ನೀರಿನ ದರ ಪರಿಷ್ಕರಣೆಯಾಗಿಲ್ಲ ಎಂದರು. ಹೊಸ ದರದ ವಿಚಾರವಾಗಿ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡಲಾಗುವುದು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದರು.

