alex Certify ಧೂಮಪಾನ ತ್ಯಜಿಸಲು ಸುಲಭದ ಮಾರ್ಗ, ಹೀಗೆ ಮಾಡಿದ್ರೆ ಬಿಟ್ಟೇ ಬಿಡಬಹುದು ಸಿಗರೇಟ್‌ ಚಟ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧೂಮಪಾನ ತ್ಯಜಿಸಲು ಸುಲಭದ ಮಾರ್ಗ, ಹೀಗೆ ಮಾಡಿದ್ರೆ ಬಿಟ್ಟೇ ಬಿಡಬಹುದು ಸಿಗರೇಟ್‌ ಚಟ…..!

ತಂಬಾಕು ಮತ್ತು ನಿಕೋಟಿನ್ ಶ್ವಾಸಕೋಶಗಳು ಹಾಗೂ ದೇಹದ ಇತರ ಅಂಗಗಳಿಗೆ ಸಾಕಷ್ಟು ಹಾನಿಯನ್ನುಂಟುಮಾಡುತ್ತದೆ. ಧೂಮಪಾನದ ವ್ಯಸಕ್ಕೆ ಬಿದ್ದರೆ ಅದನ್ನು ತ್ಯಜಿಸುವುದು ಬಹಳ ಕಷ್ಟ. ಮಾನಸಿಕ ಮತ್ತು ದೈಹಿಕ ಶಾಂತಿಗಾಗಿ ಧೂಮಪಾನ ಮಾಡುವುದಾಗಿ ಆ ಚಟಕ್ಕೆ ಬಿದ್ದವರು ಹೇಳಿಕೊಳ್ತಾರೆ. ವಯಸ್ಸನ್ನೂ ಲೆಕ್ಕಿಸದೇ ಸಿಗರೇಟ್‌ ಹುಚ್ಚಿಗೆ ಅಂಟಿಕೊಂಡುಬಿಡುತ್ತಾರೆ. ಆದರೆ ಧೂಮಪಾನ ಎಲ್ಲರಿಗೂ ಹಾನಿಕಾರಕ. ಈ ಚಟವನ್ನು ಒಂದು ದಿನದಲ್ಲಿ ಬಿಡಲು ಸಾಧ್ಯವಿಲ್ಲ.

ಇದು ಇದ್ದಕ್ಕಿದ್ದಂತೆ ನಿಮ್ಮ ದೇಹದೊಳಗೆ ಕಡುಬಯಕೆಯನ್ನು ಸೃಷ್ಟಿಸುತ್ತದೆ. ಆಲ್ಕೋಹಾಲ್ ಅಥವಾ ಸಿಗರೇಟಿನ ಚಟಕ್ಕೆ ಒಳಗಾಗಿದ್ದರೆ ಅದನ್ನು ಏಕೆ ಬಿಡಬೇಕು ಎಂದು ನೀವು ಮೊದಲು ಅರಿತುಕೊಳ್ಳಬೇಕು? ಇಲ್ಲದಿದ್ದರೆ ಅದನ್ನು ಎಂದಿಗೂ ಬಿಡಲು ಸಾಧ್ಯವಿಲ್ಲ.  ಸಿಗರೇಟು ಬಿಡುವ ಮುನ್ನ ಮನಸ್ಸಿನಲ್ಲಿ ನಿರ್ಧಾರ ಕೈಗೊಳ್ಳಿ, ಏನೇ ಆಗಲಿ, ಯಾವುದೇ ಸಂದರ್ಭ ಬಂದರೂ ಧೂಮಪಾನವನ್ನು ಬಿಡಲೇಬೇಕೆಂದು. ಇದರ ನಂತರ ದಿನಾಂಕವನ್ನು ನಿಗದಿಪಡಿಸಿ ಮತ್ತು ಈ ಅಭ್ಯಾಸವನ್ನು ಸಕಾರಾತ್ಮಕ ಮನಸ್ಸಿನಿಂದ ಬಿಡಿ.

ನೀವು ಸಿಗರೇಟ್ ತ್ಯಜಿಸಿದ್ದೀರಿ ಎಂದು ನಿಮ್ಮ ಸುತ್ತಮುತ್ತಲಿನ ಜನರಿಗೆ ಮತ್ತು ಸ್ನೇಹಿತರಿಗೆ ತಿಳಿಸಿ. ಇದು ನಿಮಗೆ ಸಹಾಯ ಮಾಡುತ್ತದೆ. ನೀವು ಮತ್ತೆ ಧೂಮಪಾನ ಮಾಡಲೆತ್ನಿಸಿದರೆ ಅದನ್ನು ಮಾಡಬಾರದೆಂದು ಸ್ನೇಹಿತರು ನೆನಪಿಸುತ್ತಾರೆ. ಸಾಮಾಜಿಕವಾಗಿ, ಅಂತಹ ನಿರ್ಧಾರವನ್ನು ಮುಕ್ತವಾಗಿ ಮಾತನಾಡಬೇಕು. ಇದರಿಂದ ಜನರು ಸಹ ನಿಮಗೆ ಸಹಾಯ ಮಾಡುತ್ತಾರೆ. ಅಕಸ್ಮಾತ್‌ ಸ್ನೇಹಿತರು ಕೂಡ ನಿಮಗೆ ಸಿಗರೇಟ್ ನೀಡಿದರೆ ಅದನ್ನು ನಿರಾಕರಿಸಿ.

ಸಿಗರೇಟ್ ಅನ್ನು ನೆನಪಿಸುವ ವಸ್ತುಗಳಿಂದ ದೂರವಿರಿ. ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಿ. ಊಟದಲ್ಲೂ ಬದಲಾವಣೆ ಮಾಡಿಕೊಳ್ಳಿ. ಒಮ್ಮೆಲೇ ಅತಿಯಾಗಿ ತಿನ್ನಬೇಡಿ. ಚಿಕ್ಕ ಚಿಕ್ಕ ಮೀಲ್‌ಗಳನ್ನು ಸೇವಿಸಿ. ಹಣ್ಣುಗಳು ಮತ್ತು ತರಕಾರಿಗಳೊಂದಿಗೆ ಆರೋಗ್ಯಕರ ಆಹಾರವನ್ನೇ ಸೇವಿಸಿ. ಜೊತೆಗೆ ಜ್ಯೂಸ್ ಅನ್ನು ಕುಡಿಯಿರಿ. ಇದರಿಂದ ನಿಮ್ಮ ಕಡುಬಯಕೆಗಳನ್ನು ಶಾಂತವಾಗಿರಿಸಿಕೊಳ್ಳಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...