HomeKarnatakaಬೀದಿ ಬದಿ ವ್ಯಾಪಾರಿ ಮೊಗದಲ್ಲಿ ಸಂತಸ ತಂದ ಚಿತ್ರ ಕಲಾವಿದ​

ಬೀದಿ ಬದಿ ವ್ಯಾಪಾರಿ ಮೊಗದಲ್ಲಿ ಸಂತಸ ತಂದ ಚಿತ್ರ ಕಲಾವಿದ​

ಬೆಂಗಳೂರು: ಕೆಲವರಿಗೆ ಇತರರ ಮೊಗದಲ್ಲಿ ನಗು ತರಿಸುವುದು ಎಂದರೆ ತುಂಬಾ ಖುಷಿಯ ವಿಷಯ. ಕಷ್ಟಪಟ್ಟು ದುಡಿಯುವ ಬೀದಿ ವ್ಯಾಪಾರಿಗಳ ಮೊಗದಲ್ಲಿ ಬೆಂಗಳೂರಿನ ವ್ಯಕ್ತಿಯೊಬ್ಬರು ನಗು ತರಿಸಿದ ವಿಡಿಯೋ ಒಂದು ವೈರಲ್​ ಆಗಿದೆ. ಛಾಯಾಚಿತ್ರಕಾರ ಅದ್ಭುತ ಭಾವಚಿತ್ರವನ್ನು ರಚಿಸಿ ಈ ರೀತಿ ವ್ಯಾಪಾರಿಯ ಮೊಗದಲ್ಲಿ ಸಂತಸ ತರಿಸಿದ್ದಾರೆ.

ಮನೋಜ್ ಕುಮಾರ್ ಅವರು ಈ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಅವರು ಬೋಂಡಾ ಮಾರಾಟಗಾರರಿಂದ ಕೆಲವು ತಿಂಡಿಗಳನ್ನು ಖರೀದಿಸುವುದನ್ನು ತೋರಿಸುತ್ತದೆ. ಅದನ್ನು ತಿಂದಾದ ಬಳಿಕ ಕಲಾವಿದ ಮಾರಾಟಗಾರನ ಭಾವಚಿತ್ರವನ್ನು ಚಿತ್ರಿಸಲು ಪ್ರಾರಂಭಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅದು ಮುಗಿಸಿದ ನಂತರ, ಅವರು ಮಾರಾಟಗಾರನನ್ನು ಸಮೀಪಿಸಿ ಚಿತ್ರ ತೋರಿಸಿದಾಗ ಆತ ತುಂಬಾ ಖುಷಿಯಿಂದ ನಗುವುದನ್ನು ಕಾಣಬಹುದು. ಈ ಪೋಸ್ಟ್ ಲಕ್ಷಾಂತರ ವೀಕ್ಷಣೆಗಳನ್ನು ಮತ್ತು ಅನೇಕ ಪ್ರತಿಕ್ರಿಯೆಗಳನ್ನು ಸಂಗ್ರಹಿಸಿದೆ. ಜನರು ವೀಡಿಯೊದಿಂದ ಸಂಪೂರ್ಣವಾಗಿ ಸಂತೋಷಪಟ್ಟಿದ್ದಾರೆ ಮತ್ತು ಮನುಷ್ಯನ ನಗು ಎಷ್ಟು ಅಮೂಲ್ಯವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular