ಬೆಂಗಳೂರಿನ ಕೆ.ಆರ್. ಸರ್ಕಲ್ ನ ಅಂಡರ್ ಪಾಸ್ ನಲ್ಲಿ ಮುಳುಗಿ ಟೆಕ್ಕಿ ಸಾವು ಪ್ರಕರಣದಲ್ಲಿ ಬಿಬಿಎಂಪಿ ಅಧಿಕಾರಿಗಳಿಗೆ ಲೋಕಾಯುಕ್ತ ನೋಟಿಸ್ ಜಾರಿ ಮಾಡಿದೆ.
ಮುಖ್ಯ ಆಯುಕ್ತರು ಸೇರಿ 8 ಮಂದಿ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ. ಸುಮೋಟೋ ಕೇಸ್ ದಾಖಲಿಸಿಕೊಂಡಿರುವ ಲೋಕಾಯುಕ್ತ ಘಟನೆ ಬಗ್ಗೆ ಸಂಪೂರ್ಣ ವರದಿ ನೀಡುವಂತೆ 2 ವಾರಗಳ ಗಡುವು ನೀಡಿದೆ.
ಮೇ 21 ರಂದು ಜರುಗಿದ ಘಟನೆಯಲ್ಲಿ ಆಂಧ್ರ ಮೂಲದ ಟೆಕ್ಕಿ ಭಾನುರೇಖಾ ಮಳೆನೀರಲ್ಲಿ ಸಿಲುಕಿ ಮೃತಪಟ್ಟಿದ್ದರು.