alex Certify ಕ್ಯಾನ್ಸರ್ ಅನ್ನು ಸೋಲಿಸಿ ಮತ್ತೆ ಕರ್ತವ್ಯಕ್ಕೆ ಮರಳಿದ ಶ್ವಾನ; ಹೃದಯಸ್ಪರ್ಶಿ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾನ್ಸರ್ ಅನ್ನು ಸೋಲಿಸಿ ಮತ್ತೆ ಕರ್ತವ್ಯಕ್ಕೆ ಮರಳಿದ ಶ್ವಾನ; ಹೃದಯಸ್ಪರ್ಶಿ ವಿಡಿಯೋ ವೈರಲ್

ಪಂಜಾಬ್ ಪೊಲೀಸ್ ಕ್ಯಾನೈನ್ ಸ್ಕ್ವಾಡ್‌ನ ಲ್ಯಾಬ್ರಡಾರ್ ತಳಿಯ ಶ್ವಾನವು ಕ್ಯಾನ್ಸರ್ ನಿಂದ ಗೆದ್ದು ತನ್ನ ಕರ್ತವ್ಯಕ್ಕೆ ಮರಳಿದೆ. ಈ ಹೃದಯಸ್ಪರ್ಶಿ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಹಂಚಿಕೊಂಡಿದ್ದಾರೆ

ಸಿಮ್ಮಿ ಎಂಬ ನಾಯಿ ಕ್ಯಾನ್ಸರ್ ಅನ್ನು ಸೋಲಿಸಿ ತನ್ನ ಕರ್ತವ್ಯಕ್ಕೆ ಮರಳಿದೆ. ಪಂಜಾಬ್ ಪೊಲೀಸ್‌ನ ಕ್ಯಾನೈನ್ ಸ್ಕ್ವಾಡ್‌ನ ಲ್ಯಾಬ್ರಡಾರ್ ನಾಯಿ ಚೇತರಿಸಿಕೊಂಡ ನಂತರ ತನ್ನ ಕರ್ತವ್ಯಕ್ಕೆ ಮರಳಿದೆ. ವಿಡಿಯೋದಲ್ಲಿ, ಸಿಮ್ಮಿ ವಾಹನದಿಂದ ಇಳಿಯುತ್ತಿರುವಾಗ ಪೊಲೀಸ್ ಅದರ ಬಾರು ಹಿಡಿದಿರುವುದನ್ನು ಕಾಣಬಹುದು. ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಎಚ್ಚರಿಕೆ. ಅವಳು ಹೋರಾಟಗಾರ್ತಿ ಎಂದು ಅವರು ಟ್ವಿಟರ್‌ನಲ್ಲಿ ಶೀರ್ಷಿಕೆ ಬರೆದಿದ್ದಾರೆ.

ಸಿಮ್ಮಿ ಬಹಳ ದಿನಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದಳು. ಈಗ ಆಕೆಯ ಆರೋಗ್ಯ ಸುಧಾರಿಸಿದೆ. ವಿಧ್ವಂಸಕ ಕೃತ್ಯಗಳ ವಿರುದ್ಧ ತಪಾಸಣೆಗೆ ಈಕೆ ಸಹಾಯ ಮಾಡುತ್ತಾಳೆ. ಅಲ್ಲದೆ ಈ ಹಿಂದೆ ವಿದೇಶಿಯರಿಂದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲು ಪೊಲೀಸರಿಗೆ ಸಹಾಯ ಮಾಡಿದ್ದಾಳೆ ಎಂದು ಫರೀದ್‌ಕೋಟ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಹರ್ಜಿತ್ ಸಿಂಗ್ ತಿಳಿಸಿದ್ದಾರೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಮಾಧ್ಯಮ ಬಳಕೆದಾರರು ಸಂತೋಷಪಟ್ಟಿದ್ದಾರೆ ಮತ್ತು ಕಾಮೆಂಟ್‌ಗಳ ವಿಭಾಗದಲ್ಲಿ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...