HomeSpecialನದಿಗಳಿಗೆ ʼನಾಣ್ಯʼ ಎಸೆಯುವುದರ ಹಿಂದಿತ್ತು ಈ ವೈಜ್ಞಾನಿಕ ಕಾರಣ

ನದಿಗಳಿಗೆ ʼನಾಣ್ಯʼ ಎಸೆಯುವುದರ ಹಿಂದಿತ್ತು ಈ ವೈಜ್ಞಾನಿಕ ಕಾರಣ

ಮನದಲ್ಲಿರುವ ಕೋರಿಕೆ ಈಡೇರಲಿ ಎಂದುಕೊಂಡು ನೀವೆಷ್ಟು ಬಾರಿ ಜಲಧಾರೆ ಅಥವಾ ನದಿಗಳಿಗೆ ನಾಣ್ಯ ಹಾಕಿಲ್ಲ ? ನಾವೆಲ್ಲಾ ನಮ್ಮ ಜೀವನದ ಒಂದೊಂದು ಘಟ್ಟಗಳಲ್ಲಿ ಇಂಥದ್ದೊಂದು ಕೆಲಸ ಮಾಡಿಯೇ ಇರಬಹುದು.

ಹೀಗೆ ಮಾಡುವುದರಿಂದ ಒಳ್ಳೆಯ ಅದೃಷ್ಟ ನಮ್ಮದಾಗುತ್ತದೆ ಎಂದು ನಂಬಿಕೆಯಿದೆ. ನಮ್ಮ ದೇಶದಲ್ಲಂತೂ ಪ್ರತಿಯೊಂದು ನದಿಗೂ ಹೀಗೆ ನಾಣ್ಯಗಳನ್ನು ಎಸೆಯುವ ವಾಡಿಕೆ ಇದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೀಗೆ ಮಾಡುವುದರಿಂದ ಲಕ್ಷ್ಮಿ ತಮ್ಮ ಬದುಕುಗಳಿಗೆ ಬರುತ್ತಾಳೆ ಎಂದು ಕೆಲವರು ನಂಬುತ್ತಾರೆ. ಕೆಲವರು ಇದೊಂದು ಮೂಢ ನಂಬಿಕೆ ಎನ್ನುತ್ತಾರೆ. ಆದರೆ ಶತಮಾನಗಳ ಹಿಂದೆ ಆರಂಭಗೊಂಡ ಈ ಕ್ರಿಯೆಯ ಹಿಂದಿನ ವೈಜ್ಞಾನಿಕ ಕಾರಣ ಹೀಗಿದೆ.

ಇಂದಿನ ದಿನಗಳಲ್ಲಿ ಅಲ್ಯೂಮಿನಿಯಂ ಅಥವಾ ಸ್ಟೇನ್‌ಲೆಸ್ ಉಕ್ಕಿನ ನಾಣ್ಯಗಳನ್ನು ಬಳಸುತ್ತಿರುವಂತೆ ಅಂದಿನ ದಿನಗಳಲ್ಲಿ ತಾಮ್ರದ ನಾಣ್ಯಗಳನ್ನು ಬಳಸಲಾಗುತ್ತಿತ್ತು. ತಾಮ್ರದ ಧಾತುವಿನಿಂದ ಮಾನವನ ಆರೋಗ್ಯಕ್ಕೆ ಬಹಳ ಪ್ರಯೋಜನಗಳಿವೆ. ತಾಮ್ರದ ಬಿಂದಿಗೆಗಳಲ್ಲಿ ಶೇಖರಿಸುವ ಮೂಲಕ ನೀರು ಶುದ್ಧಗೊಳ್ಳುತ್ತದೆ ಎಂದು ಪ್ರಾಚೀನ ಆಯುರ್ವೇದ ತಿಳಿಸುತ್ತದೆ. ಅಮೆರಿಕದ ಪರಿಸರ ರಕ್ಷಣಾ ಸಂಸ್ಥೆ (ಇಪಿಎ) ತಾಮ್ರ ಹಾಗೂ ಹಿತ್ತಾಳೆಯಂಥ ತಾಮ್ರದ ಮಿಶ್ರಲೋಹಗಳು 99.9%ನಷ್ಟು ಸೋಂಕುಕಾರಕ ಸೂಕ್ಷ್ಮಜೀವಿಗಳನ್ನು ಎರಡು ಗಂಟೆಗಳಲ್ಲಿ ಕೊಲ್ಲುತ್ತವೆ ಎಂದು ತಿಳಿಸಿದೆ.

ತಾಮ್ರದ ಈ ಶುದ್ಧೀಕರಣದ ಗುಣದ ಕಾರಣದಿಂದ ನಮ್ಮ ಹಿರೀಕರು ನದಿಗಳಿಗೆ ನಾಣ್ಯಗಳನ್ನು ಎಸೆಯುವ ಮೂಲಕ ನದಿಗಳಲ್ಲಿ ಶುದ್ಧ ಕುಡಿಯುವ ನೀರು ಸಿಗಲಿ ಎಂದು ಬಯಸುತ್ತಿದ್ದರು. ಜಲಾಗಾರಗಳನ್ನು ಸೋಂಕು ಮುಕ್ತವಾಗಿಸಲೆಂದು ಈ ಸಂಪ್ರದಾಯವನ್ನು ಶತಮಾನಗಳ ಕಾಲ ಪಾಲಿಸಿಕೊಂಡು ಬರಲಾಗುತ್ತಿತ್ತು.

ಈ ದಿನಗಳಲ್ಲಿ ಟಂಕಿಸಲಾಗುವ ನಾಣ್ಯಗಳನ್ನು ಬೇರೆಯದ್ದೇ ಲೋಹಗಳಿಂದ ಮಾಡಲ್ಪಟ್ಟರೂ ಸಹ ನಾವು ಅದೇ ಸಂಪ್ರದಾಯವನ್ನು ಪಾಲಿಸಿಕೊಂಡು ಸಾಗುತ್ತಿದ್ದೇವೆ. ಹೀಗಾಗಿ, ನದಿಗಳಿಗೆ ನಾಣ್ಯ ಎಸೆಯುವುದರ ಹಿಂದಿನ ನಿಜ ಉದ್ದೇಶ ಹೀಗೆ ಕಾಲಗರ್ಭದಲ್ಲಿ ಅಡಗಿ ಹೋಗಿದೆ.

For Latest News Updates, Join Our Whatsapp Community🚩
RELATED ARTICLES

Most Popular