ನಟ ಶರ್ವಾನಂದ್ ಮತ್ತು ರಕ್ಷಿತಾ ರೆಡ್ಡಿಯವರ ವಿವಾಹ ಜೂನ್ 3 ರಂದು ನಡೆಯಲಿದೆ ಎಂದು ವರದಿಯಾಗಿದೆ. ಇತ್ತೀಚಿಗೆ ಇಬ್ಬರ ಎಂಗೇಜ್ ಮೆಂಟ್ ಮುರಿದುಬಿದ್ದಿದೆ ಎಂಬ ವದಂತಿಗಳ ನಡುವೆ ಅವರ ಮದುವೆ ದಿನಾಂಕ ನಿಶ್ಚಯವಾಗಿರೋದು ಬಹಿರಂಗವಾಗಿದೆ.
ಯುಎಸ್ ಮೂಲದ ಟೆಕ್ಕಿ ರಕ್ಷಿತಾ ರೆಡ್ಡಿ ಅವರೊಂದಿಗೆ ನಟ ಶರ್ವಾನಂದ್ ಈ ವರ್ಷದ ಜನವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ರಾಜಸ್ಥಾನದ ಜೈಪುರದಲ್ಲಿ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ಈಗಾಗಲೇ ಮದುವೆಯ ಆಮಂತ್ರಣಗಳು ಹೊರಬಿದ್ದಿವೆ. ಜೈಪುರದ ಲೀಲಾ ಪ್ಯಾಲೇಸ್ನಲ್ಲಿ ಮದುವೆ ಸಮಾರಂಭ ನಡೆಯಲಿದೆ.
ಮದುವೆಯ ಪೂರ್ವ ಸಮಾರಂಭಗಳಿಗೆ ಸಂಬಂಧಿಸಿದಂತೆ ಜೂನ್ 2 ರಂದು ಮೆಹಂದಿ ಕಾರ್ಯಕ್ರಮ ನಡೆಯಲಿದೆ. ಮದುವೆಯ ದಿನವೇ ಶರ್ವಾನಂದ್ ಅವರ ಹಳದಿ ಶಾಸ್ತ್ರ ಕಾರ್ಯಕ್ರಮವೂ ನಡೆಯಲಿದೆ.