HomeLatest Newsಕೊಹ್ಲಿ ಮೇಲಿರುವ ಸಿರಾಜ್ ಅಭಿಮಾನಕ್ಕೆ ಫ್ಯಾನ್ಸ್ ಫಿದಾ; ವೈರಲ್ ಆಗ್ತಿದೆ ಇಬ್ಬರ ಫೋಟೋ

ಕೊಹ್ಲಿ ಮೇಲಿರುವ ಸಿರಾಜ್ ಅಭಿಮಾನಕ್ಕೆ ಫ್ಯಾನ್ಸ್ ಫಿದಾ; ವೈರಲ್ ಆಗ್ತಿದೆ ಇಬ್ಬರ ಫೋಟೋ

ಮೊಹಮ್ಮದ್ ಸಿರಾಜ್ ಆಗಾಗ್ಗೆ ವಿರಾಟ್ ಕೊಹ್ಲಿ ತನ್ನ ಗುರು ಮತ್ತು ಹಿರಿಯ ಸಹೋದರನಂತೆ ಹೇಳುತ್ತಾರೆ. ಆ ರೀತಿ ಸಿರಾಜ್ ಬರೀ ಬಾಯಿ ಮಾತಿಗೆ ಹೇಳಲ್ಲ, ನಿಜವಾಗಿಯೂ ಸ್ಟಾರ್ ಕ್ರಿಕೆಟರ್ ಕೊಹ್ಲಿ ಬಗ್ಗೆ ಸಿರಾಜ್ ರವರಿಗೆ ಅಂಥದ್ದೊಂದು ನಿಜವಾದ ಭಾವನೆಯಿದೆ.

ಆ ಭಾವನೆಯಿಂದ್ಲೇ ಸಿರಾಜ್ ಕೊಹ್ಲಿಯೊಂದಿಗಿನ ಫೋಟೋವನ್ನ ಫ್ರೇಮ್ ಹಾಕಿಸಿ ತಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದಾರೆ. ಇದನ್ನು ನೋಡಿ ಕೊಹ್ಲಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಗುರುವಾರ ಆರ್ ಸಿ ಬಿ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಐಪಿಎಲ್ ಪಂದ್ಯಕ್ಕಾಗಿ ರಾಯಲ್ ಚಾಲೆಂಜರ್ಸ್ ಟೀಂ ಹೈದರಾಬಾದ್ ಗೆ ಬಂದಿಳಿಸಿದೆ. ಈ ವೇಳೆ ಸಿರಾಜ್ ತಮ್ಮ ನೂತನ ಮನೆಯಲ್ಲಿ ತಮ್ಮ ತಂಡದ ಸದಸ್ಯರಿಗೆ ವಿಶೇಷ ಔತಣ ಕೂಟ ಏರ್ಪಡಿಸಿದ್ದರು. ಈ ವೇಳೆ ತೆಗೆದ ಫೋಟೋಗಳಲ್ಲಿ ಗೋಡೆ ಮೇಲಿದ್ದ ಸಿರಾಜ್ ಮತ್ತು ಕೊಹ್ಲಿಯಿರುವ ಫೋಟೋ ಗಮನ ಸೆಳೆದಿದೆ. ನೆಟಿಜನ್‌ಗಳು ಇಬ್ಬರು ಆಟಗಾರರ ನಡುವಿನ ಬಾಂಧವ್ಯವನ್ನು ಇಷ್ಟಪಟ್ಟಿದ್ದಾರೆ ಮತ್ತು ಸಿರಾಜ್ ಅವರ ಉತ್ತಮ ಗೆಸ್ಚರ್‌ಗಾಗಿ ಶ್ಲಾಘಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular